

ಶಿರ್ವ: ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ವತಿಯಿಂದ ಭಾನುವಾರ ಶ್ರೀ ದುರ್ಗಾಪರಮೇಶ್ವರೀ ದೇವಿ ಸಾನ್ನಿಧ್ಯದಲ್ಲಿ 28ನೇ ವರ್ಷದ ದುರ್ಗಾಹೋಮ ಸೇವೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಕಾರ್ಕಳ ಎಸ್‌ವಿಟಿ ವನಿತಾ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಮದಾಸ್ ಪ್ರಭು, ಶಿರ್ವ ಸಂತಮೇರಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಡಾ.ವಿಟ್ಠಲ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ರಾಜಾಪುರ ಸಾರಸ್ವತ ಸೇವಾ ವೃಂದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಮಂಗಳೂರು ವಿಜಯವಾಣಿ ಪತ್ರಿಕೆ ಸ್ಥಾನೀಯ ಸಂಪಾದಕ ಸುರೇಂದ್ರ ವಾಗ್ಲೆ, ಬೆಂಗಳೂರು ಗ್ರೇಸ್ ಗುರುಕುಲದ ಸಂಸ್ಥಾಪಕ ಪರಿವರ್ತನಾ ಗುರು ಸುಬ್ರಹ್ಮಣ್ಯ ಕುಲೇದು, ಕಾರ್ಕಳ ಎಸ್‌ವಿಟಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್, ಶಿರ್ವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು ಗಂಪದ ಬೈಲು, ಅನಂತರಾಮ ವಾಗ್ಲೆ ಉಪಸ್ಥಿತರಿದ್ದರು.