ನಿವೃತ್ತ ಶಿಕ್ಷಕ ಕೆ.ಸದಾಶಿವ ಶೆಟ್ಟಿಗೆ ಗೌರವ

gan (13)
Published on

ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಸರಣಿ ಕಾರ್ಯಕ್ರಮದ ವಾಲಿಕೆಯಲ್ಲಿ ನಿವೃತ್ತ ಶಿಕ್ಷಕ ಕೆ.ಸದಾಶಿವ ಶೆಟ್ಟಿ ಹೊಸಾಡು ಅವರನ್ನು ಅವರ ಮನೆಯಲ್ಲಿ ಮಂಗಳವಾರ ಗೌರವಿಸಲಾಯಿತು.

ಬಳಿಕ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಾನಸ ವಾತನಾಡಿ, ಇದೊಂದು ವಿಶಿಷ್ಟವಾದ ಮತ್ತು ವಿಭಿನ್ನವಾದ ಕಾರ್ಯಕ್ರಮ ಎಂದು ಹೇಳುತ್ತಾ ಶಿಕ್ಷಕರಾಗಿ ವಿಶೇಷ ಸೇವೆ ಸಲ್ಲಿಸಿ ಸವಾಜದ ಸ್ವಾಸ್ಥ್ಯ ಕಾಪಾಡಲು ಅಹರ್ನಿಶಿ ದುಡಿದ ಶಿಕ್ಷಕ ಕೆ.ಸದಾಶಿವ ಶೆಟ್ಟಿ ಅವರು ಸವಾಜದ ದಾರಿದೀಪ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಅವರು ಸದಾಶಿವ ಶೆಟ್ಟರ ಸೇವಾ ವಿವರಗಳನ್ನು ಸಭೆಗೆ ನೀಡಿದರು. ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸನ್ಮಾನಿತರನ್ನು ಕಗ್ಗದ ಮೂಲಕ ಅಭಿನಂದಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶುಭಾಶಯ ಕೋರಿದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಭಾಸ್ಕರ ಮಯ್ಯ, ಡಾ.ಕಿಶೋರ್ ಶೆಟ್ಟಿ, ಹೊಸಾಡು ಪಂಚಾಯತ್ ವಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮತ್ತು ಕಸಾಪ ಜಿಲ್ಲಾ ಮತ್ತು ತಾಲೂಕು ಟಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ಕಾರ್ಯದರ್ಶಿ ದಿನಕರ್ ಆರ್. ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಮಂಜುನಾಥ್ ಕೆ.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net