

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆ ನಿವೃತ್ತ ಸಹ ಶಿಕ್ಷಕ ಜಯಂತ ಶೆಟ್ಟಿ ದಂಪತಿಯನ್ನು ಕುಂದಾಪುರ ಕೋಸ್ಟಲ್ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ ಗೌರವಿಸಿದರು.
ಲಯನ್ಸ್ ಕ್ಲಬ್ ವಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ಕಂದಾವರ, ವಸಂತರಾಜ ಶೆಟ್ಟಿ ವಂಡ್ಸೆ, ನಾರಾಯಣ ಶೆಟ್ಟಿ ಕಡ್ರಿ, ಸುಕುವಾರ ಶೆಟ್ಟಿ ಹೇರಿಕುದ್ರು, ಕಿರಣ್ ಹೆಗ್ಡೆ ಅಂಪಾರು, ಅರುಣ್ ಕುವಾರ್ ಶೆಟ್ಟಿ ಅಂಪಾರು, ಉದಯ್ ಕುವಾರ್ ಶೆಟ್ಟಿ ಮಚಟ್ಟು, ಪ್ರಭಾಕರ ಶೆಟ್ಟಿ ಯಳಂತೂರು, ನಿತೀಶ್ ಶೆಟ್ಟಿ ಬಸ್ರೂರು, ಪ್ರಶಾಂತ್ ಶೆಟ್ಟಿ ಶಿರೂರು, ಗಣೇಶ ಬೈಂದೂರು, ವಿಜಯ್ ಕುವಾರ್ ಶೆಟ್ಟಿ ಹಂದುಕುಂದ, ಸಂತೋಷ್‌ಕುವಾರ್ ಶೆಟ್ಟಿ ವಡೇರಹೋಬಳಿ, ಅಜಯ್ ಕುವಾರ್ ಶೆಟ್ಟಿ ಅಂಪಾರು, ಪ್ರಕಾಶ್ ಶೆಟ್ಟಿ ಬಗ್ವಾಡಿ, ರಾಜೀವ ಶೆಟ್ಟಿ ಹೆಂಗವಳ್ಳಿ ಉಪಸ್ಥಿತರಿದ್ದರು.
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಭುಜಂಗ ಶೆಟ್ಟಿ ರಟ್ಟಾಡಿ ವಂದಿಸಿದರು.