ಗಂಗೊಳ್ಳಿಯಲ್ಲಿ ನಿವೃತ್ತ ಯೋಧಗೆ ಸನ್ಮಾನ

yodha
ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಗಣಪತಿ ಖಾರ್ವಿ ಬಸ್ರೂರು ಅವರನ್ನು ಗೌರವಿಸಲಾಯಿತು
Published on

ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಗಂಗೊಳ್ಳಿ ಸ.ವಿ. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಗಣಪತಿ ಖಾರ್ವಿ ಬಸ್ರೂರು ಅವರನ್ನು ಗೌರವಿಸಲಾಯಿತು.

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಎಂ.ನಾಗೇಂದ್ರ ಪೈ, ಮಾಜಿ ಅಧ್ಯಕ್ಷರಾದ ಉಮೇಶ್ ಎಲ್.ಮೇಸ್ತ, ವಾಸುದೇವ ಶೇರುಗಾರ್, ಜನಾರ್ದನ ಪೂಜಾರಿ ಪೆರಾಜೆ, ದಯಾನಂದ ಗಾಣಿಗ, ಪ್ರದೀಪ ಡಿ.ಕೆ., ಬಿ.ಲಕ್ಷ್ಮೀಕಾಂತ ಮಡಿವಾಳ, ಸುಗುಣಾ ಆರ್.ಕೆ., ರೋಟರಿ ಪದಾಧಿಕಾರಿಗಳು ಹಾಗೂ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net