

ಗಂಗೊಳ್ಳಿ: ಬೈಂದೂರು ವಲಯದ ಬಡಾಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಮಾಲೋಚನಾ ಸಭೆ ಶನಿವಾರ ನಡೆಯಿತು.
ಶಾಲೆ ದತ್ತು ಸ್ವೀಕಾರ ಮಾಡಿರುವ ಲೋಕೇಶ ಅಡಿಗ ಮಾತನಾಡಿದರು. ಶಿಕ್ಷಣದೊಂದಿಗೆ ಸತ್ಯಶೀಲತೆ, ನ್ಯಾಯ, ಧರ್ಮಾಚರಣೆ, ಸಂಸ್ಕೃತಿ ಕೂಡಿದಾಗ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.
ಬಿಆರ್ಪಿ ರಾಮಕೃಷ್ಣ ದೇವಾಡಿಗ, ಜಯಪ್ರಕಾಶ್ ಶೆಟ್ಟಿ, ಸುಮಂಗಲ, ವಿಶ್ವನಾಥ ಪೂಜಾರಿ, ಎಸ್.ಆನಂದ ಮೊಗವೀರ, ಎಸ್ಡಿಎಂಸಿ ಅಧ್ಯಕ್ಷ ಶ್ರೀಧರ ದೇವಾಡಿಗ, ಮಂಜುನಾಥ ದೇವಾಡಿಗ, ರಾಜ ಖಾರ್ವಿ, ಮಾಧವ ಅಡಿಗ, ರಶ್ಮಿ, ರಾಕೇಶ್ ಶೇಟ್ ಉಪಸ್ಥಿತರಿದ್ದರು. ಸಿಆರ್ಪಿ ನಾಗರಾಜ್ ನಿರೂಪಿಸಿದರು. ಮುಖ್ಯ ಶಿಕ್ಷಕಿ ರೋಹಿಣಿ ವಂದಿಸಿದರು.