

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ರಜತ ಮಹೋತ್ಸವ ಸಮಾರಂಭ ಪ್ರಯುಕ್ತ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರುಗಿದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪನ್ಯಾಸಕರನ್ನು ಗೌರವಿಸಲಾಯಿತು.
ಡಾ.ಎಂ.ವೈ.ಮಂಜುಳಾ, ಪ್ರೊ.ಮಹಾವೀರ ಜೈನ್, ಪ್ರೊ.ಬಾಲಕೃಷ್ಣ ಆಚಾರ್ಯ, ಡಾ.ರಶ್ಮಿ ರಾಮನಾಥ್, ಡಾ.ದೀಪ ಎಂ.ರಸ್ಕಿನ್ಹಾ, ಡಾ.ಕಾವ್ಯಶ್ರೀ, ಡಾ.ವಂದನಾ ಜೈನ್ ಮತ್ತು ಡಾ.ಮಹೇಶ್ ಬಾಬು ಅವರನ್ನು ಅತಿಥಿಗಳಾದ ಶ್ರದ್ಧಾ ಅಮಿತ್, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್‌ಚಂದ್ರ ಎಸ್, ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ, ಡಾ.ಸುಮಿತ್ ದತ್ತ್ ಮೊದಲಾದವರು ಗೌರವಿಸಿದರು.
ಡಾ.ಶಿಫಾಲಿ ಎಸ್.ಕೆ, ಡಾ.ವರ್ಷ ಮಳಗಿ, ಡಾ.ಅಶ್ವಿನಿ ಶೆಟ್ಟಿ, ಸಿಂಧೂ ವಿ, ಶ್ವೇತಾ ಪಿ.ಎನ್, ಸಾಯುಜ್ಯ, ದಿಲ್ನಾ, ಅಶ್ವಿನಿ ಎಚ್. ಮತ್ತು ರಮ್ಯಾ ಕೆ. ಅವರನ್ನು ಪುರಸ್ಕರಿಸಲಾಯಿತು.