ಪದಾಳ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಅಂಕುರಪೂಜೆ : ಎಂಟು ಮಂಡಳಿಗಳಿಂದ ದಿನವಿಡೀ ಭಜನಾ ಸೇವೆ

New Project (21)
Published on

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಗುರುವಾರ ಮುಂಜಾನೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ ಪಂಚಕ ಬಿಂಬ ಶುದ್ಧಿ, ಖನನಾದಿ ಸ್ಥಳ ಶುದ್ಧಿ ಸಹಿತ ಹಲವಾರು ವೈದಿಕ ವಿಧಿವಿಧಾನಗಳು ನಡೆದವು.

ಮಧ್ಯಾಹ್ನ ಮಹಾಪೂಜೆ ಜರುಗಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದಿ.ನಡಸಾರು ಜಯರಾಮ ಭಟ್ ವೇದಿಕೆಯಲ್ಲಿ ಎಂಟು ಭಜನಾ ಮಂಡಳಿಗಳಿಂದ ದಿನವಿಡೀ ಭಜನಾ ಸೇವೆ ನಡೆಯಿತು. ಮಯೂರ ವೇದಿಕೆಯಲ್ಲಿ ಉಪ್ಪಿನಂಗಡಿ ಗಾನ ಭಾರತಿ ಸಂಗೀತ ಶಾಲೆ ವತಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು.ಮಧ್ಯಾಹ್ನ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತಣೆ ಭಕ್ತರ ಭಕ್ತಿ ರಸ ಧಾರೆಯಲ್ಲಿ ಮುಳುಗಿಸಿತು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಣಿಕ್ಕಳ ಜಗದೀಶ್ ರಾವ್, ಆಡಳಿತ ಮಂಡಳಿ ಅಧ್ಯಕ್ಷ ನಡುಸಾರ ಉದಯಶಂಕರ್ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಚಂದಪ್ಪ ಮೂಲ್ಯ, ಡಾ.ರಾಜಾರಾಮ ಕೆ.ಬಿ, ಪ್ರತಾಪ್ ಪೆರಿಯಡ್ಕ, ಉಷಾಚಂದ್ರ ಮುಳಿಯ, ಸುರೇಶ್ ಅತ್ರಮಜಲು, ಎನ್.ಜಯಗೋವಿಂದ ಶರ್ಮ, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಗೌಡ ನೆಡ್ಚಿಲ್, ಸುರೇಶ್ ಗೌಂಡತ್ತಿಗೆ, ಶಾಂಭವಿ ರೈ, ಲೋಕೇಶ್ ಪೂಜಾರಿ, ರಾಧಾಕೃಷ್ಣ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಧರ್ಣಪ್ಪ ನಾಯ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್.ಉಮೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ಇಂದು ಭಕ್ತಿ ಭಾವ ಸಂಗಮ

ಶ್ರೀ ದೇವಾಲಯದಲ್ಲಿ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸ್ವಶಾಂತಿ, ಅದ್ಭುತ ಶಾಂತಿ, ಚೋರ ಶಾಂತಿ ಹೋಮಾದಿಗಳ ಸಹಿತ ಹಲವಾರು ವೈದಿಕ ವಿಧಿವಿಧಾನಗಳು ನಡೆದು, ಅನ್ನಸಂತರ್ಪಣೆ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ನೆಲೆಯಲ್ಲಿ ಭಕ್ತಿ ಭಾವ-ಸಂಗಮ, ಭರತನಾಟ್ಯ, ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆದು, ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರುಗಲಿದೆ. ಸಭೆಯಲ್ಲಿ ಡಾ.ರವೀಶ್ ಪಡುಮಲೆ, ಶಕುಂತಳಾ ಶೆಟ್ಟಿ, ಸುಚರಿತ ಶೆಟ್ಟಿ, ಪದ್ಮರಾಜ್ ಆರ್.ಪೂಜಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net