31ರ ಮೊದಲು ಆಯುಧ ಲೇಸೆನ್ಸ್ ಅರ್ಜಿ

application
Published on

ಸುಳ್ಯ: ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುವ ಆಯುಧ ಲೈಸೆನ್ಸ್ ಹೊಂದಿರುವವರು ನವೀಕರಣಕ್ಕೆ ಡಿ.31ರೊಳಗಾಗಿ ಅರ್ಜಿ ಸಲ್ಲಿಸುವಂತೆ ತಾಲೂಕು ದಂಡಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಆಯುಧ ಲೈಸೆನ್ಸ್ ಹೊಂದಿರುವ ಪರವಾನಗಿದಾರರು ಡಿ.31ರ ಮೊದಲು ನವೀಕರಣ ಅರ್ಜಿ ಸಲ್ಲಿಸಬೇಕು. ಬಳಿಕ ಸ್ವೀಕೃತವಾಗುವ ಅರ್ಜಿಗಳಿಗೆ ದಂಡ ವಿಧಿಸಿ ನವೀಕರಣಗೊಳಿಸಬೇಕಾಗುತ್ತದೆ ಎಂದು ಸುಳ್ಯ ತಹಸೀಲ್ದಾರ್ ಮಂಜುಳಾ ಎಂ.ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net