ಶಿರ್ಲಾಲುವಿನ ಎಂ.ಅಕ್ಷತಾ ಶೆಣೈಗೆ ಸನ್ಮಾನ

akshatha
ರಾಜ್ಯಮಟ್ಟದಲ್ಲಿ ಮೂರನೇ ರ‌್ಯಾಂಕ್ ಪಡೆದ ಕಾರ್ಕಳ ತಾಲೂಕು ಶಿರ್ಲಾಲುವಿನ ಎಂ.ಅಕ್ಷತಾ ಶೆಣೈ ಅವರನ್ನು ಸನ್ಮಾನಿಸಲಾಯಿತು
Published on

ಕಾರ್ಕಳ: ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ವಿಪುಲ ಅವಕಾಶಗಳಿವೆ. ನಿರ್ದಿಷ್ಟ ಉದ್ಯೋಗಕ್ಕೆ ಸಹಕಾರಿಯಾಗುವ ಶಿಕ್ಷಣ ವ್ಯವಸ್ಥೆಯಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಆಸಕ್ತಿಗಳಿಗೆ ಅನುರೂಪವಾದ ಶಿಕ್ಷಣ ಪಡೆಯುವ ಪ್ರಯತ್ನ ಮಾಡಬೇಕು ಎಂದು ಸಿವಿಲ್ ಇಂಜಿನಿಯರ್ ಶ್ರೀನಿವಾಸ ಜಿ.ಕೆ.ಪೈ ಹೇಳಿದರು.

ಬೆಂಗಳೂರಿನ ಶೇಷಾದ್ರಿಪುರಂ ಕಂಪೋಸಿಟ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ, ರಾಜ್ಯಮಟ್ಟದಲ್ಲಿ ಮೂರನೇ ರ‌್ಯಾಂಕ್ ಪಡೆದ ಕಾರ್ಕಳ ತಾಲೂಕು ಶಿರ್ಲಾಲುವಿನ ಎಂ.ಅಕ್ಷತಾ ಶೆಣೈ ಅವರನ್ನು ಪೆರ್ವಾಜೆ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಧ್ಯಾನ ಮಂದಿರದಲ್ಲಿ ಸನ್ಮಾನಿಸಿ ಮಾತನಾಡಿದರು.

ವೀಣಾ ವಿನಾಯಕ ಶೆಣೈ, ಪ್ರತೀಕ್ಷಾ ಪ್ರಭು, ಲೋಕೋಪಯೋಗಿ ಇಲಾಖೆ ಕಾಂಟ್ರಾಕ್ಟರ್ ವೆಂಕಟೇಶ ಪ್ರಭು ಶಿರ್ಲಾಲು, ಮಂದಿರದ ಪ್ರವರ್ತಕ ನಿರ್ಮಲಾ ಎಸ್.ಪೈ ಉಪಸ್ಥಿತರಿದ್ದರು. ಶೈಲಜಾ ಶೆಟ್ಟಿ ಸ್ವಾಗತಿಸಿದರು. ಶ್ಯಾಮ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಸುಕೇಶ್ ಎ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net