

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ಮರುಡಾಂಬರು ಕಾಮಗಾರಿ ಸಂದರ್ಭ ಬಿಳಿ ಬಣ್ಣದ ಗುರುತು ಮಾಸಿದ ಕಾರಣ ಅಪಘಾತ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಬಗ್ಗೆ ‘ವಿಜಯವಾಣಿ’ ಮೇ 26ರಂದು ವರದಿ ಪ್ರಕಟಿಸಿದ್ದು, ಮಂಗಳವಾರ ಬಿಳಿ ಬಣ್ಣ ಹಾಕುವ ಕಾರ್ಯ ಆರಂಭಗೊಂಡಿದೆ.
ಹೇರೂರು ಸೇತುವೆ ಬಳಿಯಿಂದ ಬೈಕಾಡಿ ತನಕ ಗುರುತು ಹಾಕುವ ಕಾರ್ಯ ನಡೆದಿದೆ. ಮಾಬುಕಳದಿಂದ ಕಲ್ಯಾಣಪುರ ತನಕ ಹಲವಾರು ತಿರುವುಗಳು ಇದ್ದ ಕಾರಣ ರಾತ್ರಿ ಹೊತ್ತು ದ್ವಿಚಕ್ರ ವಾಹನ ಸವಾರರು ಸೇರಿದಂತೆ ಘನವಾಹನ ಸಂಚಾರಕ್ಕೆ ರಸ್ತೆ ದೀಪ ಇಲ್ಲದ ಭಾಗದಲ್ಲಿ ರಸ್ತೆ ಕಾಣದೆ ಡಿವೈಡರ್‌ಗಳಿಗೆ ಡಿಕ್ಕಿ ಹೊಡೆದು ಒಂದೇ ತಿಂಗಳಲ್ಲಿ ಹಲವಾರು ಸಾವು ನೋವು ಸಂಭವಿಸಿತ್ತು. ಮಳೆ ಹೆಚ್ಚುತ್ತಿರುವ ಈ ಸಂದರ್ಭ ಅತಿ ಬೇಗನೆ ಒಣಗುವ ತಂತ್ರಜ್ಞಾನದಿಂದ ಬಣ್ಣ ಹಾಕಲಾಗುತ್ತಿದೆ.