

ಸುಬ್ರಹ್ಮಣ್ಯ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಅವರ ಮೃತದೇಹವನ್ನು ಕುಮಾರಧಾರ ನದಿಯಲ್ಲಿ ಪತ್ತೆ ಹಚ್ಚಿದ ಶೋಧ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡದವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್. ಇಂಜಾಡಿ ಮಾರ್ಗದರ್ಶನದಲ್ಲಿ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್ ಸನ್ಮಾನಿಸಿದರು.
ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಡಿ.ದೇವರಗದ್ದೆ, ದೇಗುಲದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಸಿಬ್ಬಂದಿ ರಾಜಲಕ್ಷ್ಮೀ ಶೆಟ್ಟಿಗಾರ್, ಅಶೋಕ್ ಅತ್ಯಡ್ಕ, ಮಹಾಬಲೇಶ್ವರ ದೋಳ, ಪೂರ್ಣಿಮಾ, ಉಜ್ವಲ್ ಕಜ್ಜೋಡಿ, ಲೋಕನಾಥ್ ಪರ್ವತಮುಖಿ, ಚಿದಾನಂದ ಕುಳ, ಸ್ಥಳೀಯರಾದ ಸೋಮಶೇಖರ್ ಕಟ್ಟೆಮನೆ, ರತ್ನಾ ಕುಮಾರಿ ನೂಚಿಲ ಮತ್ತಿತರರಿದ್ದರು.