

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿದರೆ ಜೀವನ ಪಾವನ. ಆಷಾಢ ಮಾಸದ ಏಕಾದಶಿಯಿಂದ ಉತ್ಥಾನ ದ್ವಾದಶಿಯ ನಾಲ್ಕು ತಿಂಗಳು ಭಗವಂತ ಯೋಗನಿದ್ರೆಯಲ್ಲಿರುತ್ತಾನೆ. ಭಗವಂತ ಯೋಗನಿದ್ರೆಯಿಂದ ಎದ್ದ ಬಳಿಕ ಉತ್ತಮ ಮುಹೂರ್ತಗಳು ಆರಂಭವಾಗುತ್ತವೆ ಎಂದು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀಪಾದರ 29ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಮಠದ ದಿವಾನ ಸುದರ್ಶನ ಜೋಯೀಸ, ಕಲಾವಿದ ಯಜ್ಞೇಶ್ ಆಚಾರ್ ಉಪಸ್ಥಿತರಿದ್ದರು. ಬಳಿಕ ಕಲಾವಿದ ಯಜ್ಞೇಶ್ ದೇವರಗದ್ದೆ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಬೆಂಗಳೂರಿನ ಶ್ಯಾನುಭೋಗ ಸಹೋದರಿಯರಾದ ಶ್ರೀರಕ್ಷಾ ಮತ್ತು ಶ್ರೀರಶ್ಮಿ ಅವರಿಂದ ದಾಸರಪದಗಳ ಗಾಯನ ನಡೆಯಿತು.