

ವಿರಾಜಪೇಟೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಬಾಸ್ಕೆಟ್‌ಬಾಲ್ ಆಟಗಾರ್ತಿ ತಾತಂಡ ಜ್ಯೋತಿ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವುದರ ಜತೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿಯೂ ಗುರುತಿಸಿ ಕೊಂಡಿರುವ ತಾತಂಡ ಜ್ಯೋತಿ ಪ್ರಕಾಶ್ ಅವರ ಸಾಧನೆಯನ್ನು ಪರಿಗಣಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಅವರ ಮನೆಗೆ ತೆರಳಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜ್ಯೋತಿ ಪ್ರಕಾಶ್ ಇದಕ್ಕಿಂತಲೂ ಮೊದಲು ನಾನು ಸನ್ಮಾನಗೊಂಡಿದ್ದರೂ ಇದು ನನಗೆ ವಿಶೇಷ ಸನ್ಮಾನವಾಗಿರುತ್ತದೆ. ಕೊಡವಾಮೆಯನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ನೀವು ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಎಲೆಮರೆಯ ಕಾಯಿಯಂತೆ ಇರುವವರನ್ನು ಹುಡುಕಿ ಅವರ ಮನೆ ಮನೆಗೆ ತೆರಳಿ ಅವರನ್ನು ಗೌರವಿಸಿ ಸನ್ಮಾನ ಮಾಡುತ್ತಿರುವುದು ನನಗೆ ತುಂಬಾ ಸಂತೋಷವನ್ನು ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸಂಸ್ಥಾಪಕಿ ಚಿಮ್ಮಚ್ಚಿರ ಪವಿತ ರಜನ್, ಖಜಾಂಚಿ ಬೊಜ್ಪಂಗಡ ಭವ್ಯ ದೇವಯ್ಯ, ಸದಸ್ಯೆ ಇಟ್ಟಿರ ಭವ್ಯ ಈಶ್ವರ್ ಇದ್ದರು.