

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (ಆರ್.ವಿ. ಶಿಕ್ಷಣ ಸಂಸ್ಥೆಗಳು) ಅಧ್ಯಕ್ಷ ಹಾಗೂ ಆರ್.ವಿ. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿದ್ದ ಡಾ.ಎಂ.ಕೆ. ಪಾಂಡುರಂಗಶೆಟ್ಟಿ ಅವರಿಗೆ ಬೆಂಗಳೂರು ರೋಟರಿ ಕ್ಲಬ್ನಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ.ಎಂ.ಕೆ.ಪಾಂಡುರಂಗಶೆಟ್ಟಿ ಅವರು ವಯೋಸಹಜ ಕಾರಣದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಭಾನುವಾರ ಬೆಳಗ್ಗೆ 10ರ ವರೆಗೆ ಜಯನಗರದ ಅಶೋಕಪಿಲ್ಲರ್ ರಸ್ತೆಯಲ್ಲಿರುವ ಆರ್.ವಿ. ಟೀಚರ್ ಕಾಲೇಜು ಸಭಾಂಗಣದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಬಳಿಕ ಬನಶಂಕರಿ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ ಅವರು ಪಾಸ್ಟ್ ರೋಟರಿ ಇಂಟರ್ನ್ಯಾಷನಲ್ ಡೈರೆಕ್ಟರ್ ಕೂಡ ಆಗಿದ್ದರಿಂದ ರೋಟರಿ ಕ್ಲಬ್ ಆಫ್ ಬೆಂಗಳೂರು ಸಂಸ್ಥೆಯ ಪದಾಧಿಕಾರಿಗಳು ಇಂದು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.