

ತಿ.ನರಸೀಪುರ: ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸಮಾನಮನಸ್ಕರ ವೇದಿಕೆ ವತಿಯಿಂದ ಸಮುದಾಯದ ಪ್ರಮುಖರಿಗೆ ಶನಿವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೇಳವರಹುಂಡಿ ಸಿದ್ದಪ್ಪ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಡಣಾಯ್ಕನಪುರ ಮಲ್ಲಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಶಿವಕುಮಾರ್(ಸತ್ಯ), ಬಿಜೆಪಿ ಮಾಧ್ಯಮ ಜಿಲ್ಲಾ ವಕ್ತಾರ ದಯಾನಂದ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ತೊಂಟೇಶ್, ಶರಣ ಬಜ್ಜಿ ನಿಂಗಪ್ಪ, ಕಟ್ಟೆಪುರ ಓಂಕಾರಸ್ವಾಮಿ, ತುರುಗನೂರು ಮಲ್ಲೇಶ್ ಸಿದ್ದಲಿಂಗಸ್ವಾಮಿ, ಕೆಬ್ಬೆಹುಂಡಿ ಸೋಮಶೇಖರ್, ಹೇಳವರಹುಂಡಿ ಮೂರ್ತಿ, ಶೇಖರ್, ಮೋಹನ್, ಸಾಲೂರು ಸ್ವಾಮಿ, ಪೂಜಿತ್ ಕುಮಾರ್, ಶಶಿ, ವಕೀಲ ಜ್ಞಾನೇಂದ್ರಮೂರ್ತಿ, ಎಂಎಲ್ ಹುಂಡಿ ನಾಗೇಶ್, ಬಸವಣ್ಣ, ಮಾಸ್ಟರ್ ಸೋಮಣ,್ಣ ಕರೋಹಟ್ಟಿ ಸಂಜಯ್, ಅಂಗಡಿ ನಾಗೇಶ್, ಸಿಬಿಹುಂಡಿ ನಟ, ಮಹೇಶ್ ಕೆಬ್ಬೆಹುಂಡಿ, ಮಾಯಪ್ಪ, ಅಕ್ಕಿ ನಾಗಪ್ಪ ಇತರರು ಇದ್ದರು.