ಉದ್ಯಮಿ ಎನ್.ಆರ್.ಅನಂತಕುಮಾರ್‌ಗೆ ಸನ್ಮಾನ

ಉದ್ಯಮಿ ಎನ್.ಆರ್.ಅನಂತಕುಮಾರ್‌ಗೆ ಸನ್ಮಾನ
Published on

ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಖಾಸಗಿ ಶಾಲೆಗಿಂತ ಉತ್ತಮ ಸೌಲಭ್ಯಗಳನ್ನು ಒದಗಿಸಿರುವ ಉದ್ಯಮಿ ಎನ್.ಆರ್.ಅನಂತಕುಮಾರ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಹಂಗರಹಳ್ಳಿ ಸರ್ಕಾರಿ ಶಾಲೆ ಉತ್ತಮ ಶಾಲೆ ಎನಿಸಿಕೊಂಡಿದೆ. ಇಂತಹ ಉನ್ನತ ಸ್ಥಾನ ದೊರಕಲು ಉದ್ಯಮಿ ಎನ್.ಆರ್. ಅನಂತ್ ಕುಮಾರ್ ಹಾಗು ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಈ ಶಾಲೆಯ ಶಿಕ್ಷಕರು ಕಾರಣರಾಗಿದ್ದಾರೆ. ತಾಲೂಕಿನ ಹಳೇಕೋಟೆ ಹೋಬಳಿಯ ಹಂಗರಹಳ್ಳಿ ಶಾಲೆಯಲ್ಲಿ ಎಲ್ ಕೆ ಜಿ ಯಿಂದ 7ನೇ ತರಗತಿವರೆಗೆ ಇದು,್ದ ಈ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರಿಗೂ ಉತ್ತಮ ಸೌಲಭ್ಯ ಒದಗಿಸಿಕೊಟಿದ್ದಾರೆ. ಕೆಲವು ಶಿಕ್ಷಕರಿಗೆ ಅನಂತ್ ಕುಮಾರ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಉತ್ತಮ ಆಟಿಕೆಗಳು, ಇಲ್ಲಿನ ವ್ಯವಸ್ಥೆ, ಶಿಕ್ಷಕರು ಪಾಠಪ್ರವಚನ ಮಾಡುವ ರೀತಿಗೆ ಪೋಷಕರು ಮೆಚ್ಚಿದ್ದಾರೆ. ಈ ಶಾಲೆಯಲ್ಲೂ 5ನೇ ತರಗತಿಯಿಂದ ಇಂಗ್ಲೀಷ್ ಮೀಡಿಯಂ ಪ್ರಾರಂಭವಾಗಿದೆ. ಇಲ್ಲಿ ಹಿಂದಿ ಭಾಷೆಯನ್ನೂ ಚೆನ್ನಾಗಿ ಕಲಿಸುತ್ತಿದ್ದಾರೆ ಎಂದರು. ಲಕ್ಷ್ಮಣ್, ಚೆನ್ನಕೇಶವ, ಮೋಹನ್ ಕುಮಾರ್, ರಂಗೇಗೌಡ, ಶಾಲಾಭಿವೃದ್ಧಿ ಸಮಿತಿಯ ರಾಮು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net