ಬುಡಕಟ್ಟು ಜನರ ಕ್ರೀಡಾ ಹಬ್ಬ

10 gkp 05
ಅತಿಥಿಗಳು ತಟ್ಟೆಬಿಲ್ಲು ಪ್ರಯೋಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
Published on

ಗೋಣಿಕೊಪ್ಪ: ಬಾಳೆಲೆ ಕಾಲೇಜು ಕ್ರೀಡಾಂಗಣದಲ್ಲಿ ಬಿರ್ಸಾಮುಂಡ ಸಮಿತಿ ವತಿಯಿಂದ ಆಯೋಜಿಸಿದ್ದ ಹಗ್ಗಜಗ್ಗಾಟ ಮತ್ತು ತಟ್ಟೆಬಿಲ್ಲು ಸ್ಪರ್ಧೆಗೆ ಮಂಗಳವಾರ ಯರವ ಸಮುದಾಯದ ದೈವಾರಾಧಕ ಮುತ್ತ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹಗ್ಗ ಜಗ್ಗಾಟ ಪುರುಷರ ಸ್ಪರ್ಧೆಯಲ್ಲಿ ಲವೆಂತ್ ಮೈಲ್ ತಿತಿಮತಿ ಪ್ರಥಮ, ಕಾನೂರು ಬ್ರಹ್ಮಗಿರಿ ವಾರಿಯರ್ಸ್ ದ್ವಿತೀಯ, ಮಹಿಳಾ ವಿಭಾಗದಲ್ಲಿ ಗೋಪಮ್ಮ ಫ್ರೆಂಡ್ಸ್ ತೋಮರ ಕೆದಮುಳ್ಳೂರು ಪ್ರಥಮ, ಲವೆಂತ್ ಮೈಲ್ ತಿತಿಮತಿ ದ್ವಿತೀಯ, ಮಹಿಳಾ ಮ್ಯುಸಿಕಲ್ ಚೇರ್ ನಲ್ಲಿ ಸುಮಿತ್ರಾ ಪ್ರಥಮ, ಗೋಪಮ್ಮ ದ್ವಿತೀಯ, ಲಲಿತಾ ತೃತೀಯ ಸ್ಥಾನ ಪಡೆದುಕೊಂಡರು.

ತಟ್ಟೆ ಬಿಲ್ಲು ಪ್ರದರ್ಶನದಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಬಿರ್ಸಾಮುಂಡ ಸಮಿತಿ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಗಿರಿಜನ ಮುಖಂಡರಾದ ಕುಡಿಯರ ಗೋಪಮ್ಮ ನಿಟ್ಟೂರು ಕಾಳ, ಗೌರಮಣೆ, ಚಕ್ಕೇರ ಮನು ಕಾವೇರಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಕೊಟ್ಟಂಗಡ ಮಧು ಮಂಜುನಾಥ್ ಹಾಜರಿದ್ದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬುಡಕಟ್ಟು ಸಾಧಕರನ್ನು ಸನ್ಮಾನಿಸಲಾಯಿತು. ನಾಟಿ ವೈದ್ಯ ಲೋಕೇಶ್, ಯೋಧ ಪಿ.ಸಿ.ಕಾಳ, ಮುತ್ತ ಮುತ್ತೂರು, ಸೋಮ, ಚಿಕ್ಕಣ್ಣ, ದೈವಾರಾಧನೆಗಾಗಿ ಸುಬ್ರಮಣಿ, ಸಮಾಜ ಸೇವೆಗಾಗಿ ಪಿ.ಚಂದ, ಕೃಷಿ ಮತ್ತು ತೋಟಗಾರಿಕೆ ವಿಭಾಗದಲ್ಲಿ ಬೆಂಡೆಕುತ್ತಿ ಮುತ್ತ, ಸಾಮಾಜಿಕ ಹೋರಾಟಗಾರ ಗಪ್ಪು, ನಾಟಿ ವೈದ್ಯೆ ನೀಲಿ, ಗೌರಮಣಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net