ಅರಣ್ಯಾಧಿಕಾರಿಗಳಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿದ ಅತಿಕ್ರಮಣದಾರ

encroachment-clearance
Published on

ಶಿರಸಿ:ತಾಲೂಕಿನ ತಾರಗೋಡಿನಲ್ಲಿ ಅರಣ್ಯ ಇಲಾಖೆ ನೆಡುತೋಪಿನಲ್ಲಿ ಹೊಸದಾಗಿ ಅತಿಕ್ರಮಣ ಮಾಡಿ, ಕಟ್ಟಲಾಗಿದ್ದ ಮನೆಯೊಂದನ್ನು ಅರಣ್ಯಾಧಿಕಾರಿಗಳು ಅತಿಕ್ರಮಣದಾರರ ಜೀವ ಬೆದರಿಕೆ, ವಿರೋಧದ ನಡುವೆಯೂ ತೆರವು ಮಾಡಿದ್ದಾರೆ.
ತಾರಗೋಡಿನ ಅರಣ್ಯ ಸರ್ವೇ ನಂಬರ್ 55 ರಲ್ಲಿ ಹಸನ್ ಹಾಗೂ ಮೋದಿನ್ ಡೊಡ್ಮನೆ ಎಂಬುವವರು ಸಣ್ಣ ಮನೆ ಕಟ್ಟಿದ್ದರು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಅರಣ್ಯಾಧಿಕಾರಿಗಳು ತೆರವಿಗೆ ಹೋದಾಗ ಅತಿಕ್ರಮಣದಾರರು ಚಾಕು ತೋರಿಸಿ ಅರಣ್ಯಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದರು ಎನ್ನಲಾಗಿದೆ. ಅಲ್ಲದೇ, ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು. ಬಗ್ಗದ ಅರಣ್ಯಾಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮನೆಯನ್ನು ತೆರವು ಮಾಡಿದ್ದಾರೆ. ಅತಿಕ್ರಮಣದಾರರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net