ವಿದ್ಯುತ್ ತಂತಿಗೆ ಬಿದ್ದ ಮರ

New Project (7)
Published on

ಸುಳ್ಯ: ಕನಕಮಜಲು ಪಂಜಿಗುಂಡಿಯಲ್ಲಿ ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ರಾತ್ರಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ರಸ್ತೆ ಬಂದ್ ಆದುದಲ್ಲದೆ, ವಿದ್ಯುತ್ ವ್ಯತ್ಯಯ ಉಂಟಾಯಿತು.

ರಸ್ತೆ ಬದಿಯ ದೊಡ್ಡ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ 33 ಕೆ.ವಿ.ಲೈನ್‌ನ ಒಂದು ಕಂಬ ಹಾಗೂ 11 ಕೆ.ವಿ.ವಿದ್ಯುತ್‌ನ ಎರಡು ಕಂಬಗಳು ತುಂಡಾದವು.

ರಾತ್ರಿಯೇ ಮರ ತೆರವು ಕಾರ್ಯ ನಡೆದಿದ್ದರೆ, ಗುರುವಾರ ಬೆಳಗ್ಗಿನಿಂದಲೇ ವಿದ್ಯುತ್ ಕಂಬ ಅಳವಡಿಕೆ ಹಾಗೂ ಲೈನ್ ರಿಪೇರಿ ಕಾರ್ಯ ನಡೆಯಿತು. ಮರ ಬಿದ್ದ ಪರಿಣಾಮ ಸುಳ್ಯ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ತೆಂಗಿನ ಮರ ಬಿದ್ದು ಸಂಚಾರ ಅಸ್ತವ್ಯಸ್ತ: ಸುಳ್ಯ ನಗರದ ಬಾಳೆಮಕ್ಕಿ ಮುಖ್ಯ ರಸ್ತೆಯಿಂದ ಜಟ್ಟಿಪಳ್ಳ ತಿರುವಿನ ರಸ್ತೆಯಲ್ಲಿ ತೆಂಗಿನ ಮರವೊಂದು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಗೊಳಗಾದ ಘಟನೆ ಗುರುವಾರ ಸಂಜೆ ನಡೆಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಆದರೆ, ನಗರದಲ್ಲಿ ಹಾದು ಹೋಗುವ ವಿದ್ಯುತ್ ತಂತಿ ಹಾಗೂ ಕಂಬಗಳು ತುಂಡಾಗಿ ಹಾನಿ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net