ಆಸರೆ ಫ್ರೆಂಡ್ಸ್ ಕದ್ರಿ ಮುಡಿಗೇರಿದ ವಜ್ರದೇಹಿ ಟ್ರೋಫಿ

New Project
Published on

ಗುರುಪುರ: ಕುಕ್ಕುದಕಟ್ಟೆಯ ಮೈದಾನದಲ್ಲಿ ಗುರುಪುರ ವ್ಯಾಪ್ತಿಯ ವಿ.ಹಿಂ.ಪ. ಬಜರಂಗದಳ ವಜ್ರದೇಹಿ ಶಾಖೆ ಆಶ್ರಯದಲ್ಲಿ ಭಾನುವಾರ 2 ಅಶಕ್ತ ಕುಟುಂಬಗಳಿಗೆ ಸೇವಾ ಯೋಜನೆಯಾಗಿ ಆಯೋಜಿಸಲಾದ 3ನೇ ವರ್ಷದ ‘ವಜ್ರದೇಹಿ ಟ್ರೋಫಿ-2025’ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಸರೆ ಫ್ರೆಂಡ್ಸ್ ಕದ್ರಿ ಪ್ರಥಮ ಸ್ಥಾನದೊಂದಿಗೆ ಟ್ರೋಫಿ ತನ್ನದಾಗಿಸಿತು.

ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಜೇಸಿ ಫ್ರೆಂಡ್ಸ್ ಜಲ್ಲಿಗುಡ್ಡೆ ಗುರುಪುರ ಮತ್ತು ಆಸರೆ ಕದ್ರಿ ತಂಡಗಳ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಪಂದ್ಯ ‘ಟೈ’ ಆದ ಹಿನ್ನೆಲೆಯಲ್ಲಿ ಸೂಪರ್ ಓವರ್ ತೀರ್ಮಾನದಲ್ಲಿ ಆಸರೆ ಫ್ರೆಂಡ್ಸ್ ಕದ್ರಿ ಗೆಲುವಿನ ಕೇಕೆ ಹಾಕಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಾದೊಂದಿಗೆ ಆಯೋಜಿಸಲಾದ ಟೂರ್ನಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗುರುಪುರ ಗ್ರಾ.ಪಂ. ಸದಸ್ಯರಾದ ಸಚಿನ್ ಅಡಪ, ಸುನೀಲ್ ಪೂಜಾರಿ, ರಾಜೇಶ್ ಸುವರ್ಣ ಗುರುಪುರ, ವಿಹಿಂಪ ಗುರುಪುರ ಘಟಕ ಅಧ್ಯಕ್ಷ ನಾಗೇಶ್ ಕೊಟ್ಟಾರಿ, ಘಟಕದ ಸಂಚಾಲಕ ಹೇಮಚಂದ್ರ ಗುರುಪುರ, ಘಟಕದ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಪತ್ರಕರ್ತ ಧನಂಜಯ ಗುರುಪುರ ಮತ್ತಿತರರು ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಸತ್ಸಂಗ ಪ್ರಮುಖ್ ವಸಂತ ಸುವರ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net