

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದೀಕ್ಷಾ ದಿನೋತ್ಸವ ಪ್ರಯುಕ್ತ ಜು. 27ರಂದು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಕೋ ವರ್ಲ್ಡ್ ಸಹಯೋಗದಲ್ಲಿ ಬೆಂಗಳೂರು ವಿವಿ ಆವರಣದಲ್ಲಿನ ಬಯೊಟೆಕ್ನಾಲಜಿ ಮತ್ತು ಮೈಕ್ರೊ ಬಯೋಲಜಿ ವಿಭಾಗದ ಬಳಿ ಬೆಳಗ್ಗೆ 7 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಈ ವೇಳೆ 500ಕ್ಕೂ ಅಧಿಕ ಸಸಿಗಳನ್ನು ನಡೆಲಾಗುವುದು ಎಂದು ಪ್ರಕಟಣೆ ತಿಳಿಸಿದೆ.