ಚಲಿಸುತ್ತಿದ್ದ ಬೈಕ್ ಮೇಲೆ‌ ಬಿದ್ದ ಮರ

Tree fall on
Published on

ಯಲ್ಲಾಪುರ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ಮಂಗಳವಾರ ಸಂಜೆ ನಡೆದಿದೆ. 

ಕಿರವತ್ತಿಯ ದೊಡ್ಡ ಡೈರಿಯ ನೌಕರ, ಕಲಘಟಗಿ ಮೂಲದ ಮಾರುತಿ ಲಕ್ಷ್ಮಣ ಬಾಂದೇಕರ್ ಗಾಯಗೊಂಡ ವ್ಯಕ್ತಿ. ಈತ ಬೈಕ್ ಮೇಲೆ ಯಲ್ಲಾಪುರದಿಂದ ಕಿರವತ್ತಿ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಜೋರಾದ ಗಾಳಿಯಿಂದ ಏಕಾಏಕಿ ಮರದ ಟೊಂಗೆಯೊಂದು ಮುರಿದು ಬಿದ್ದಿದೆ. ಇದರಿಂದ ಬೈಕ್ ಜಖಂಗೊಂಡಿದ್ದು, ಸವಾರ ಗಾಯಗೊಂಡಿದ್ದಾನೆ. ಆತನನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಮರ ತೆರವಿಗೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net