

ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು, 5 ವಿದ್ಯುತ್ ಕಂಬ ಮತ್ತು ಕೋಳಿ ಫಾರ್ಮ್‌ಗೆ ಹಾನಿಯಾಗಿದೆ. ಮಾಣಿ-ಮೈಸೂರು ಹೆದ್ದಾರಿಯ ಬದಿಯಲ್ಲಿದ್ದ ಅರುಣ್ ಎಂಬುವರ ಕೋಳಿ ಫಾರ್ಮ್‌ಗೆ ಸಂಪೂರ್ಣ ಹಾನಿಯಾಗಿದೆ.
ಮರ ಬೀಳುವ ಸಂದರ್ಭ ವಿದ್ಯುತ್ ತಂತಿಗೆ ಸಿಕ್ಕಿಹಾಕಿಕೊಂಡ ಕಾರಣದಿಂದ 5 ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ತುರ್ತು ಕಾರ್ಯ ನಡೆಸಲಾಗಿದ್ದು, ವಿದ್ಯುತ್ ಕಂಬಗಳನ್ನು ಮರು ಜೋಡಣೆ ಮಾಡಲಾಗಿದೆ.