ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದಾತ ಮೃತ್ಯು

web - visha sevane ksd
ಗಿರಿಧರ ಪೂಜಾರಿ
Published on

ಕಾಸರಗೋಡು: ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ವ್ಯಕ್ತಿ, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಪೆರ್ಲ ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಮೃತಪಟ್ಟವರು.

ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ಸಾವು

ಪೆರ್ಲ ಶ್ರೀ ಅಯ್ಯಪ್ಪ ಮಂದಿರ ವಠಾರದಲ್ಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಕಂಡುಬಂದಿದ್ದ ಅವರನ್ನು ಕಾಸರಗೋಡಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನಂತರ ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ಸಾವು ಸಂಭವಿಸಿದೆ.

ಘನ ವಾಹನ ಚಾಲಕರಾಗಿದ್ದ ಅವರು ವಿಶ್ವಹಿಂದು ಪರಿಷತ್ ಸಮಿತಿ, ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಪದಾಧಿಕಾರಿಯಾಗಿದ್ದರು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net