ಹೆದ್ದಾರಿಗೆ ಉರುಳಿದ ಮರ : ಮೂರು ವಿದ್ಯುತ್ ಕಂಬಗಳಿಗೆ ಹಾನಿ

New Project (39)
Published on

ಬೆಳ್ತಂಗಡಿ: ಮಂಗಳೂರು - ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಚರ್ಚ್ ಸಮೀಪ ಬೃಹತ್ ಗಾತ್ರದ ಮರ ರಸ್ತೆ ಮತ್ತು ವಿದ್ಯುತ್‌ಲೈನ್ ಮೇಲೆ ಬುಧವಾರ ಉರುಳಿದ್ದು, ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಕಕ್ಕಿಂಜೆ ವಿದ್ಯುತ್ ಸಬ್‌ಸ್ಟೇಷನ್‌ನಿಂದ ಮುಂಡಾಜೆ ಫೀಡರ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಚ್.ಟಿ ವಿದ್ಯುತ್ ಕಂಬಗಳು ತುಂಡಾದ ಪರಿಣಾಮ ಮುಂಡಾಜೆ, ಸೋಮಂತಡ್ಕ, ಕಡಂಬಳ್ಳಿ, ಕಾಯರ್ತೋಡಿ, ಕೊಡಂಗೆ, ಕಲ್ಲಾರ್ಯ, ಅಂಬಡ್ತ್ಯಾರು, ನೆಯ್ಯಾಲು, ಮೂಲಾರು, ಕುಡೆಂಚಿ, ಆಸುಪಾಸಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮರವು ರಸ್ತೆಗೆ ಉರುಳಿದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು.

ಗ್ರಾಪಂ ಸದಸ್ಯ ಗಣೇಶ ಬಂಗೇರ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು, ಮೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net