ಕೋನಪಲ್ಲಿ ರಸ್ತೆಗೆ ಬಿದ್ದ ಮರ ಸಂಚಾರಕ್ಕೆ ತೊಂದರೆ

Published on

ಚಿಂತಾಮಣಿ: ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಕೋನಪಲ್ಲಿ ಗ್ರಾಮದಿಂದ ಚಾಂಡ್ರಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ವೆಂಕಟರೆಡ್ಡಿ ಎಂಬವರ ಜಮೀನಿನಲ್ಲಿದ್ದ ಬೃಹತ್​ ಬೇವಿನ ಮರ ಶನಿವಾರ ರಾತ್ರಿ ಜೋರು ಮಳೆಗೆ ರಸ್ತೆಗೆ ಬಿದ್ದಿದೆ. ಮರ ರಸ್ತೆ ಬಿದ್ದ ಪರಿಣಾಮ ರಾತ್ರಿಯಿಂದ ಬೆಳಗ್ಗೆಯುವರೆವಿಗೂ ರಸ್ತೆಯಲ್ಲಿ ಸಂಚಾರ ಅಸ್ಥವ್ಯಸ್ಥವಾಗಿತ್ತು. ಬೇವಿನ ಮರದ ಸೊಪ್ಪಿನ ಎಲೆ ಕುರಿ, ಮೇಕೆ ಸೇರಿ ಜಾನವಾರುಗಳಿಗೆ ಆಹಾರವಾದ್ದರಿಂದ ಕೋನಪಲ್ಲಿ ರೈತರು ಬೇವಿನ ಮರದ ರೆಂಬೆಗಳನ್ನು ಕಟಾವು ಮಾಡಿಕೊಂಡು ಜಾನವಾರುಗಳ ಮೇವುಗಾಗಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಚಾಂಡ್ರಹಳ್ಳಿ ಸೇರಿ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾದ್ದರಿಂದ ಕೋನಪಲ್ಲಿ ಗ್ರಾಮಸ್ಥರೇ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಕಟಾವು ಮಾಡಿ ಸಂಚಾರಕ್ಕೂ ಅನುವು ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net