

ಪಾಂಡವಪುರ: ಜಮೀನಿನಲ್ಲಿ ಬೆಳೆದಿದ್ದ ಬೀನ್ಸ್ ಫಸಲಿನ ಮೇಲೆ ಬೃಹತ್ ಮರ ಬಿದ್ದು ನಷ್ಟ ಸಂಭವಿಸಿದೆ.
ತಾಲೂಕಿನ ಕೊಡಹಳ್ಳಿ ಹೊಸೂರು ಗ್ರಾಮದ ರೈತ ಸಿದ್ದೇಗೌಡ ಅವರು ಬನ್ನಘಟ್ಟ ಸಮೀಪದ ತಮ್ಮ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದರು. ಜಮೀನಿನ ಸಮೀಪದಲ್ಲಿದ್ದ ಬೃಹತ್ ಗಾತ್ರದ ಮರ ಶನಿವಾರ ರಾತ್ರಿ ಬೆಳೆಯ ಮೇಲೆ ಬಿದ್ದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ.
ಮರ ಬೀಳುವ ಹಂತದಲ್ಲಿದ್ದು ತೆರವುಗೊಳಿಸುವಂತೆ ಅರಣ್ಯ ಇಲಾಖೆ, ಸೆಸ್ಕ್‌ಗೆ ಮನವಿ ಮಾಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷೃದಿಂದ ಪ್ರಕರಣ ನಡೆದಿದೆ. ಸೂಕ್ತ ಪರಿಹಾರ ಒದಗಿಸಬೇಕೆಂದು ಸಿದ್ದೇಗೌಡ ಒತ್ತಾಯಿಸಿದ್ದಾರೆ.