ಬಿಳಿನೆಲೆಯಲ್ಲಿ ಹೆದ್ದಾರಿಗುರುಳಿದ ಮರ

Tree
ಬಿಳಿನೆಲೆ ಬಳಿ ಹೆದ್ದಾರಿಗೆ ಉರುಳಿದ ಮರ
Published on

ಕಡಬ: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಹಿತ ಗಾಳಿ-ಮಳೆಯಾಗಿದ್ದು, ಉಪ್ಪಿನಂಗಡಿ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಹೆದ್ದಾರಿಗೆ ಮರ ಉರುಳಿ ಬಿದ್ದಿದೆ.

ಬಿಳಿನೆಲೆ ಪೇಟೆ ಸಮೀಪ ಹಾಗು ಕೊಂಬಾರು-ಸುಂಕದಕಟ್ಟೆ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಬಳಿಕ ಸಾರ್ವಜನಿಕರು, ಇಲಾಖೆಯವರು ರಸ್ತೆಯಿಂದ ಮರ ತೆರವು ಮಾಡಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮರ ಉರುಳಿ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು, ಲೈನ್‌ಗಳಿಗೆ ಹಾನಿಯುಂಟಾಗಿದೆ. ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net