ಭಕ್ತಕ್ಕೋಡಿಯಲ್ಲಿ ರಸ್ತೆಗೆ ಉರುಳಿದ ಮರ

Ism_Tree fall
Published on

ಪುತ್ತೂರು ಗ್ರಾಮಾಂತರ: ಸರ್ವೆ ಗ್ರಾಮದ ಭಕ್ತಕ್ಕೋಡಿ ಎಂಬಲ್ಲಿ ಬುಧವಾರ ರಾತ್ರಿ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದು ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿದೆ. ಸ್ಥಳೀಯ ಯುವಕರು ಮರದ ಭಾಗವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಉಳಿದ ಮರದ ಭಾಗವನ್ನು ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ತೆರವು ಮಾಡಿದರು.

ಬೆಳ್ಳಿಪ್ಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಗುರುವಾರ ಬೆಳಗ್ಗೆ ದರೆ ಕುಸಿತವಾಗಿದೆ. ಶಾಲಾ ಕಟ್ಟಡದ ಪಕ್ಕದ ಮಣ್ಣು ಸಡಿಲಗೊಂಡು ಶಾಲಾ ಕಟ್ಟಡ ಅಪಾಯದ ಸ್ಥಿತಿಗೆ ತಲುಪಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ನಡುಮನೆ ತರುವಾಡು ಬಳಿ ತೋಡಿನ ಬದಿಯ ದರೆ ಕುಸಿದಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಿ ಮಳೆನೀರು ಪಕ್ಕದ ತೋಟಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net