ಯುಪಿ ಶಾಲೆಯಿಂದ ನಗದು ಕಳ್ಳತನ

theft
Published on

ಕಾಸರಗೋಡು: ಪೊಯಿನಾಚಿಯಲ್ಲಿರುವ ಭಾರತ್ ಯುಪಿ ಶಾಲೆಗೆ ನುಗ್ಗಿದ ಕಳ್ಳರು ರೋಗಿಗಳಿಗಾಗಿ ಸಹಾಯ ಒದಗಿಸಲು ವಿದ್ಯಾರ್ಥಿಗಳು ಜೀವ ಕಾರುಣ್ಯ ಪೆಟ್ಟಿಗೆ ಮೂಲಕ ಸಂಗ್ರಹಿಸಿಡಲಾಗಿದ್ದ 15 ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ.

ಶಾಲಾ ಕಚೇರಿ ಬೀಗ ಒಡೆದು ನುಗ್ಗಿ, ಮೂರು ಪೆಟ್ಟಿಗೆಗಳಲ್ಲಿ ಸಂಗ್ರಹಿಡಿಲಾಗಿದ್ದ ಮೊತ್ತ ದೋಚಲಾಗಿದೆ. ಶಾಲೆ ಕಂಪ್ಯೂಟರ್ ಕೊಠಡಿ, ಶಾಲಾ ಸ್ಟಾಫ್ ಕೊಠಡಿ ಬೀಗ ಒಡೆದು ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿತ್ತು. ಅತಿಯಾದ ಮಳೆ ಹಿನ್ನೆಲೆಯಲ್ಲಿ ಶಾಲೆಗೆ ಕಳೆದ ಎರಡು ದಿವಸಗಳಿಂದ ರಜೆಯಾಗಿದ್ದು, ಇದೇ ಸಮಯ ಬಳಸಿ ಕಳ್ಳರು ಕೃತ್ಯವೆಸಗಿದ್ದಾರೆ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net