ಮರದ ಕೆಳಗಡೆ ಮಕ್ಕಳಿಗೆ ಪಾಠ !

17 Sirwar 2
ಮಾಡಗಿರಿಯಲ್ಲಿ ಶಾಲೆಯ ಕೊಠಡಿ ಹೊರಗಡೆ ವಿದ್ಯಾರ್ಥಿಗಳು ಕುಳಿತುಕೊಂಡಿರುವುದು.
Published on

ಸಿರವಾರ: ತಾಲೂಕಿನ ಮಾಡಗಿರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ(ಸಜ್ಜೆಹೊಲ) ಕೊಠಡಿಗಳು ಶಿಥಿಲಗೊಂಡಿದ್ದರಿಂದ ಸಂಕಷ್ಟ ಎದುರಾಗಿದೆ. ಜೀವಭಯಕ್ಕೆ ಮಕ್ಕಳನ್ನು ಕೊಠಡಿ ಹೊರಗಡೆ ಹಾಗೂ ಮರದ ನೆರಳಿನಲ್ಲಿ ಪಾಠ ಮಾಡುವ ಅನಿವಾರ್ಯ ಪರಿಸ್ಥಿತಿ ಶಿಕ್ಷಕ ಬಂದೊಗಿದೆ.

ಮಾಡಗಿರಿ ಗ್ರಾಮದ 4ನೇ ವಾರ್ಡ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರಗೆ 170 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5 ಜನ ಶಿಕ್ಷಕರಲ್ಲಿ ಪೈಕಿ ಕಾಯಂ ಒಬ್ಬದು ಹಾಗೂ ನಾಲ್ವರು ಅಥಿತಿ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು ನಾಲ್ಕು ಕೊಠಡಿಗಳಿವೆ.

ಒಂದು ಕಚೇರಿಗೆ ಉಪಯೋಗಿಸಿದರೆ, ಇನ್ನೊಂದು ಕೊಠಡಿ ಶಿಥಿಲಗೊಂಡಿದೆ. ಒಂದು ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಇನ್ನೊಂದರಲ್ಲಿ ಛಾವಣಿ ಸಿಮೆಂಟು ಉದುರುವ ಆತಂಕವಿದೆ. ಇದರಿಂದ ಮಕ್ಕಳನ್ನು ಶಿಕ್ಷಕರು ಮರದ ಕೆಳಗಡೆ ಪಾಠ ಮಾಡುತ್ತಿದ್ದಾರೆ.

ಮಕ್ಕಳಿಗೆ ಹಾಗೂ ಶಿಕ್ಷಕರ ಉಪಯೋಗಕ್ಕೆ ಎರಡು ಶೌಚಗೃಹಗಳು ಇದ್ದು, ಅವುಗಳ ಸಹ ಶಿಥಿಲಗೊಂಡಿವೆ. ಈಗಾಗಲೇ ಹೈಟೆಕ್ ಶೌಚಗೃಹ ನಿರ್ಮಾಣ ಹಂತದಲ್ಲಿದ್ದೂ ಗುತ್ತಿಗೆದಾರ ನಿರ್ಲಕ್ಷೃದಿಂದ ಇನ್ನೂ ಪೂರ್ಣಗೊಂಡಿಲ್ಲ. ಹಲವು ದಿನಗಳಿಂದ ಸಮಸ್ಯೆಗಳಿದ್ದರು ಜನಪ್ರತಿನಿಧಿಗಳು, ಅಧಿಕಾರಿಗಳ ಪರಿಹರಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಶಿಕ್ಷಕ, ಮಾಡಗಿರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಪವನ್ ಕುಮಾರ

ಶಾಲಾ ಕಟ್ಟಡ ಶಿಥಿಲಗೊಂಡ ಕುರಿತು ಗ್ರಾಮ ಪಂಚಾಯಿತಿ ಪಿಡಿಒಗೆ ಮನವಿ ನೀಡಲಾಗಿದೆ. ಬಿಇಒ ಅವರಿಗೂ ತಿಳಿಸಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಆದರೆ, ಇನ್ನೂ ಆರಂಭ ಮಾಡಿಲ್ಲ.

ಬಿಇಒ ಸಿರವಾರ

ಚಂದ್ರಶೇಖರ ದೊಡ್ಡಮನಿ

ಹೊಸ ಮೂರು ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭ ಮಾಡುವುದಕ್ಕೆ ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕೂಡಲೇ ಕಾಮಗಾರಿ ಆರಂಭ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net