ರಸ್ತೆಗೆ ಬಾಗಿದ ಗಿಡ ಮರಗಳ ತೆರವು : ಕಾರ್ಯಾಚರಣೆಗಿಳಿದ ಉಪ್ಪಿನಂಗಡಿ ಪಿಡಿಒ ನೇತೃತ್ವದ ತಂಡ

New Project (8)
Published on

ಉಪ್ಪಿನಂಗಡಿ: ಮನೆಯಂಗಳದಲ್ಲಿ ಬೆಳೆದ ಗಿಡಮರಗಳು ರಸ್ತೆಗೆ ಪಸರಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ಉಪ್ಪಿನಂಗಡಿ ಗ್ರಾಪಂ ಆಡಳಿತ ತೆರವುಗೊಳಿಸಿದೆ.

ರಸ್ತೆಯ ತಿರುವಿನಲ್ಲಿ ವಾಹನ ಸವಾರರಿಗೆ ತೊಂದರೆಯೊಡ್ಡುತ್ತಿರುವ ಗಿಡ ಮರಗಳು, ರಸ್ತೆಯ ಅಗಲವನ್ನು ಕಿರಿದುಗೊಳಿಸುವಂತೆ ಬೆಳೆದು ನಿಂತ ಹಣ್ಣಿನ, ಹೂವಿನ ಗಿಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗ್ರಸ್ ಕಚೇರಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದು ಉಪ್ಪಿನಂಗಡಿ ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ಗಿಡ ಮರಗಳನ್ನು ತೆರವುಗೊಳಿಸಿದರು. ನಟ್ಟಿಬೈಲು, ರಾಮನಗರ, ಮಠ ಕೊಪ್ಪಳ ರಾಷ್ಟ್ರೀಯ ಇಕ್ಕೆಲಗಳಲ್ಲಿ ವಿದ್ಯುತ್ ತಂತಿಗೆ ಬಾಗಿದ ಹಲವು ಮನೆಗಳ ಮರದ ಕೊಂಬೆಗಳನ್ನು ತೆರವುಗೊಳಿಸಿದರು.

ಕೆಲವು ದಿನಗಳ ಹಿಂದೆ ಶಾಸಕರ ನೇತೃತ್ವದ ಪ್ರಾಕೃತಿಕ ವಿಕೋಪದ ಸಭೆಯಲ್ಲಿ ಹಾಗೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ವ್ಯಾಪಕ ದೂರು ಕೇಳಿಬಂದಿತ್ತು. ಇದಕ್ಕೆ ಉತ್ತರಿಸಿದ ಪಿಡಿಒ ಮರ ಗಿಡಗಳ ತೆರವಿಗೆ ಗ್ರಾಪಂ ಸದಸ್ಯರು ಸರ್ವಾನುಮತದ ಅಧಿಕಾರ ನೀಡಿದರೆ ಕಾರ್ಯಾಚರಣೆಗೆ ಇಳಿಯುವುದಾಗಿ ಸ್ಪಷ್ಟ ಪಡಿಸಿ ಒಪ್ಪಿಗೆ ಪಡೆದಿದ್ದರು. ಅದರಂತೆ ಕಳೆದೆರಡು ದಿನಗಳಿಂದ ಕಾರ್ಯಾಚರಣೆ ಆರಂಭಿಸಿ ಸಾರ್ವಜನಿಕರಿಗೆ ಅಡಚಣೆಯಾಗುತ್ತಿದ್ದ ಗಿಡಮರಗಳನ್ನು ತೆರವುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net