ಹಿರಿಯರನ್ನು ಗೌರವದಿಂದ ಕಾಣಿ

29GKK1
Published on

ಗೋಕಾಕ: ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಗೌರವಾದರಗಳಿಂದ ಕಾಣಬೇಕು ಎಂದು ಒಂದನೇ ಅಧಿಕ ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ನೀಡಿದರು.

ನಗರದ ಡಿವೈಎಸ್​ಪಿ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂ ಹಾಗೂ ಪೊಲೀಸ್​ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಸಾರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ಸಮಾಜ, ಕುಟುಂಬ ಉತ್ತಮವಾಗಿ ಸಾಗಲು ಹಿರಿಯರ ಮಾರ್ಗದರ್ಶನದ ಅವಶ್ಯವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುತ್ತಿರುವ ಪ್ರವೃತ್ತಿ ಒಳ್ಳೆಯದಲ್ಲ ಎಂದರು.

ವಕೀಲ ಎಚ್​.ಎಲ್​.ಆಡಿನ ಹಿರಿಯ ನಾಗರಿಕರ ರಣಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಪ್ರಧಾನ ಸಿವಿಲ್​ ಹಾಗೂ ಜೆಎಂಎ್​ಸಿ ನ್ಯಾಯಾಧೀಶೆ ಚೆತ್ರಾ ಕುಲಕರ್ಣಿ, ಡಿವೈಎಸ್​ಪಿ ರವಿ ನಾಯಿಕ, ವಕೀಲರ ಸಂದ ಅಧ್ಯ ಜಿ.ಬಿ.ಪಾಟೀಲ, ಸಿಪಿಐ ಸುರೇಶ್​ ಬಾಬು, ಪಿಎಸ್​ಐ ಕೆ.ವಾಲಿಕರ, ವಕೀಲರ ಸಂದ ಉಪಾಧ್ಯ ವಿ.ವೈ.ಜಾಗನೂರ, ಸಹ ಕಾರ್ಯದರ್ಶಿ ಎಸ್​.ಬಿ.ವಡೇರಹಟ್ಟಿ, ಖಜಾಂಚಿ ಎ.ಸಿ. ಕಂಡ್ರಟ್ಟಿ, ಮಹಿಳಾ ಪ್ರತಿನಿಧಿ ವಿ.ಜಿ.ಸಿದ್ದಾಪೂರಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net