ನಿಧಿ ಆಸೆಗೆ ದೇವಿ ವಿಗ್ರಹ ಭಗ್ನ

3,KHH-1P
ಮಾಡ್ಲಾಕನಹಳ್ಳಿಯ ದೇವಸ್ಥಾನದ ಶ್ರೀಮಲಿಯಮ್ಮ ದೇವಿ ವಿಗ್ರಹ ಭಗ್ನಗೊಂಡಿರುವುದು.
Published on

ಕಾನಹೊಸಹಳ್ಳಿ: ಸಮೀಪದ ಮಾಡ್ಲಾಕನಹಳ್ಳಿಯ ದೇವಸ್ಥಾನದ ಶ್ರೀಮಲಿಯಮ್ಮ ದೇವಿ ವಿಗ್ರಹವನ್ನು ದುಷ್ಕರ್ಮಿಗಳು ಸೋಮವಾರ ಭಗ್ನಗೊಳಿಸಿದ್ದಾರೆ.

ಈ ಹಿಂದೆ ಪುರಾತನ ದೇವಸ್ಥಾನಗಳು ಮತ್ತು ಪಾಳೇಗಾರ ಸಂಸ್ಥಾನ ಪ್ರದೇಶ ಮತ್ತು ಶಿಲಾಯುಗದ ನೆಲೆಗಳಲ್ಲಿನ ವಿಗ್ರಹ ಮತ್ತು ಸ್ಮಾರಕಗಳನ್ನು ನಾಶ ಪಡಿಸಿದ್ದರು. ಹೀಗಾಗಿ ಶ್ರೀಮಲಿಯಮ್ಮ ದೇವಿ ಮೂರ್ತಿಯನ್ನು ಭಗ್ನಗೊಳಿಸಿರುವುದು ನಿಧಿಗಳ್ಳರೇ ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ನಾಗರಾಜ ಪೊಲೀಸ್ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net