More

    ಮುದ್ದಾದ ಪುಟ್ಟ ಬಾಲರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್!

    ಅಯೋಧ್ಯೆ: ಅಯೋಧ್ಯೆ ರಾಮಮಂದಿರಕ್ಕಾಗಿ ಬಾಲರಾಮನ ವಿಗ್ರಹ ಕೆತ್ತಿದ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಅಯೋಧ್ಯೆಯಲ್ಲಿ ಮತ್ತೊಂದು ವಿಗ್ರಹವನ್ನು ಕೆತ್ತಿದ್ದು, ಈ ಬಾರಿ ಪುಟ್ಟ ರಾಮಲಲ್ಲಾ ಮೂರ್ತಿಯನ್ನು ರಚಿಸಿದ್ದಾರೆ. ಇದರ ಫೋಟೋಗಳನ್ನು ತಮ್ಮ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್​​) ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ನೋಡ ನೋಡ ಎಷ್ಟು ಚೆಂದ ಶ್ರೇಯಾಂಕಾ ಪಾಟೀಲ್​ ಡ್ಯಾನ್ಸ್​

    “ಬಾಲರಾಮನ ದೊಡ್ಡ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ, ನಾನು ಅಯೋಧ್ಯೆಯಲ್ಲಿದ್ದಾಗ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಚಿಕ್ಕ ರಾಮಲಲ್ಲಾ ಮೂರ್ತಿಯನ್ನು (ಕಲ್ಲು) ಕೆತ್ತಿದ್ದೇನೆ” ಎಂದು ಯೋಗಿರಾಜ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಐದನೇ ತಲೆಮಾರಿನ ವಿಶಿಷ್ಟ ಕಲಾವಿದನಿಂದ ರಚಿಸಲಾದ ಮೂಲ ಬಾಲರಾಮ ವಿಗ್ರಹವನ್ನು ಕೃಷ್ಣ ಶಿಲಾ ಎಂದು ಕರೆಯಲ್ಪಡುವ ಕಲ್ಲಿನಿಂದ ಕೆತ್ತಲಾಗಿದೆ.

    ಕೃಷ್ಣ ಶಿಲಾ ಕಲ್ಲಿನಿಂದಲೇ ಕತ್ತಬೇಕು ಎಂಬುದನ್ನು ಅಯೋಧ್ಯೆ ರಾಮಮಂದಿರವೇ ಆಯ್ಕೆ ಮಾಡಿತ್ತು. ಅರುಣ್​ ಅವರ ಅಸಾಧಾರಣ ಗುಣಮಟ್ಟ ಮತ್ತು ವಿಗ್ರಹದ ಮುಖವನ್ನು ಅಲಂಕರಿಸುವ ದೈವಿಕ ಅಭಿವ್ಯಕ್ತಿಗಾಗಿ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿತ್ತು,(ಏಜೆನ್ಸೀಸ್). 

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts