ಸಾರಿಗೆ ನೌಕರರ ಮುಷ್ಕರ: ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಮಾತುಕತೆ ಕಾಯ್ತಿದ್ದಾರೆ ಡಿಸಿಎಂ ಸವದಿ

Lakshman Savadi
Published on

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೆ ದಿನಕ್ಕೆ ಕಾಲಿರಿಸಿದ್ದು, ನೌಕರರನ್ನು ಮಾತುಕತೆ ಆಹ್ವಾನಿಸಿರುವ ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಖಾಸಗಿ ನಿವಾಸದಲ್ಲಿ ಅವರಿಗಾಗಿ ಕಾಯುತ್ತಿದ್ದಾರೆ. ಪೂರ್ವನಿಗದಿತ ಕಾರ್ಯಕ್ರಮಗಳನ್ನೂ ಅವರು ರದ್ದುಗೊಳಿಸಿದ್ದು, ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ಸಂಜೆ ತನಕ ನೌಕರರ ಜತೆಗೆ ಮಾತುಕತೆಗೆ ಕಾಯುವುದಕ್ಕೆ ಸರ್ಕಾರ ಮುಂದಾಗಿದೆ. ಅಷ್ಟರೊಳಗೆ ನೌಕರರು ಮಾತುಕತೆಗೆ ಮುಂದಾಗದೇ ಇದ್ದರೆ ಸೂಕ್ತ ತೀರ್ಮಾನವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ. ನೌಕರರು ಪಟ್ಟು ಸಡಿಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಂ ಸವದಿ ಅವರಿಗೆ ಇಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಜತೆಗೆ ಮೀಟಿಂಗ್ ನಿಗದಿ ಆಗಿತ್ತು. ಅದನ್ನೂ ರದ್ದುಗೊಳಿಸಿರುವ ಸವದಿ, ನೌಕರರ ಸಮಸ್ಯೆ ಇತ್ಯರ್ಥಕ್ಕೆ ಆದ್ಯತೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net