ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರು ಆರಂಭಿಸಿದ ಪ್ರತಿಭಟನೆ ಇಂದು ಮೂರನೆ ದಿನಕ್ಕೆ ಕಾಲಿರಿಸಿದೆ. ಮೊದಲ ದಿನದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿತ್ತು. ಎರಡನೆ ದಿನವಾದ ನಿನ್ನೆ ನೌಕರರು ದಿಢೀರ್ ಮುಷ್ಕರ ಆರಂಭಿಸಿದಾಗ ಉಪಮುಖ್ಯಮಂತ್ರಿಗಳೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಎರಡರೆಡರು ಸಲ ನೌಕರರ ಯೂನಿಯನ್ ಲೀಡರ್ಗಳ ಜತೆಗೆ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ.
ನಿನ್ನೆ ಮಾತುಕತೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ್ದ ಡಿಸಿಎಂ ಸವದಿ ಅವರು, ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ನೌಕರರ ಯೂನಿಯನ್ ನಾಯಕರನ್ನು ಕರೆದು ಸಭೆ ನಡೆಸಿ ಅಲ್ಲೇ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದಾರೆ. ಆದಾಗ್ಯೂ, ಶನಿವಾರವೂ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದು, ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಂದುವರಿದಿದೆ ಮುಷ್ಕರ
ಹಳೆ ಬಸ್ ನಿಲ್ದಾಣ ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಪ್ರಯಾಣಿಕರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಪ್ರದೇಶ, ದೂರದ ಊರುಗಳಿಗೆ ಸಂಚರಿಸುವವರ ಪರದಾಟ ಹೇಳತೀರದು. ನಿನ್ನೆಯಿಂದ ಹಳೆ ಬಸ್ ನಿಲ್ದಾಣದಲ್ಲೇ ಉಳಿದವರೂ ಇದ್ದಾರೆ. ಒಂದಕ್ಕೆ ಮೂರರಷ್ಟು ಬೆಲೆ ಕೊಟ್ಟು ಊಟ, ಚಹಾ ಸವಿಯಬೇಕಾದ ಸ್ಥಿತಿ ಎದುರಿಸಿದ್ದಾರೆ. ಅತ್ತ ಮನೆಗೂ ಹೋಗದೇ ಪ್ರಯಾಣಿಕರ ಗೋಳು ಸರ್ಕಾರದ ಕಿವಿಗೆ ಇನ್ನೂ ಬಿದ್ದಂತಿಲ್ಲ.
ವಿಜಯಪುರದಲ್ಲಿ ಬಸ್ ಸಂಚಾರವಿಲ್ಲ
ಸಾರಿಗೆ ನೌಕರರ ಮುಷ್ಕರ ದಿಂದ ವಿಜಯಪುರದಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ಹೊರ ರಾಜ್ಯಗಳಿಂದ ಬಂದ ಪ್ರಯಾಣಿ ಕರು ಗೋಳಾಡುವಂತಾಗಿದೆ. ಮಹಾರಾ ಷ್ಟ್ರದ ಬಾಡನಿಂದ ಬಂದ ಮಹಿಳೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ತೆರಳಲು ಬಸ್ ಇಲ್ಲದೆ ಪರಾದಡುತ್ತಿದ್ದಾರೆ. ಇನ್ನು ಮಕ್ಕಳನ್ನ ಕಟ್ಟಿಕೊಂಡು ನಿಲ್ದಾಣದಲ್ಲಿ ಕಣ್ಣೀರು ಇಟ್ಟಿದ್ದಾಳೆ.
ಚಿತ್ರದುರ್ಗದಲ್ಲಿ ಮುಂದುವರಿದ ಮುಷ್ಕರ
ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಚಿತ್ರದುರ್ಗ ನಿಲ್ದಾಣದಿಂದ ಹೊರಕ್ಕೆ ಹೋಗದ ಬಸ್ಸುಗಳು, ಅನ್ಯ ಜಿಲ್ಲೆಗಳಿಂದಲೂ ನಿಲ್ದಾಣ ಬಸ್ಗಳು ಆಗಮಿಸಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ನಿಲ್ದಾಣದೆಡೆಗೆ ಮುಖ ಮಾಡದ ಪ್ರಯಾಣಿಕರು. ಪರಸ್ಥಳಗಳಿಗೆ ತೆರಳಲು ಖಾಸಗಿ ಬಸ್ಸುಗಳನ್ನ ಅವಲಂಬಿಸಿದ ಪ್ರಯಾಣಿಕರು, ಮುಷ್ಕರ ನಿಲ್ಲಿಸದ ನೌಕರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..