

ತಾವರಗೇರಾ: ಈ ಬಾರಿ ಉತ್ತಮ ಮಳೆಯಿಂದಾಗಿ ಬಿತ್ತನೆಗೊಂಡ ಎಲ್ಲ ಫಸಲು ಸಮೃದ್ಧವಾಗಿ ಬೆಳೆದಿದ್ದು, ಬೆಲೆ ಕುಸಿತದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದನ್ನೂ ಓದಿ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ
ತಾವರಗೇರಾ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಾಗಿ ತೊಗರಿ ಬೆಳೆದಿದ್ದಾರೆ. ಪ್ರತಿ ಎಕರೆಗೆ 4 ರಿಂದ 5 ಕ್ವಿಂಟಾಲ್ ಇಳುವರಿ ಬಂದಿದೆ. ಇದಕ್ಕೆ ತಂಕ್ಕಂತೆ ಬೆಲೆ ಇಲ್ಲ. ಪಟ್ಟಣದ ಎಪಿಎಂಸಿಯಲ್ಲಿ ಹತ್ತು ದಿನಗಳ ಹಿಂದೆ ಕ್ವಿಂಟಾಲ್ ತೊಗರಿಗೆ 9900 ರೂ.ನಿಂದ 10,400 ರೂ.ವರೆಗೆ ಇದ್ದ ಬೆಲೆ, ಇದೀಗ 8000 ರೂ.ಗೆ ಕುಸಿದಿದೆ.
ಕಾರ್ಯದರ್ಶಿ ಎಪಿಎಂಸಿ ತಾವರಗೇರಾಸುರೇಶತೊಗರಿ ಬೆಲೆ ಕಡಿಮೆ ಆದಾಗ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಸ್ಥಾಪಿಸುವ ಅವಕಾಶವಿದೆ. ಆದರೆ, ಸದ್ಯ ಸರ್ಕಾರದ ಬೆಂಬಲ ಬೆಲೆ 7550 ಇದ್ದು, ಮಾರುಕಟ್ಟೆಯಲ್ಲಿ ರೂ.8300 ಇದ್ದ ಕಾರಣ, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶಿಲಿಸಿ ಕ್ರಮ ಕೈಗೊಳ್ಳಲಾಗುವುದು.ಇದರಿಂದ ರೈತರು ಕಂಗಾಗಲಾಗಿದ್ದಾರೆ. ಹೀಗಾಗಿ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆಯಡಿ ಫಸಲು ಖರೀದಿಸಬೇಕೆಂದು ರೈತರಾದ ಶಿವಪ್ಪ ತಾಳಿಕೋಟೆ, ವೀರಭದ್ರಪ್ಪ, ಲಿಂಗನಗೌಡ ಇತರರು ಒತ್ತಾಯಿಸಿದ್ದಾರೆ.