ಸಿರುಗುಪ್ಪ: ವಿದೇಶಿ ಉತ್ಪನ್ನದ ಮೇಲೆ ಅವಲಂಬನೆಯಾಗದೆ ಸ್ವಾವಲಂಬಿಗಳಾಗಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಕೆಒಎಫ್ ರಾಜ್ಯಾಧ್ಯಕ್ಷ ಮಾಜಿ ಸಚಿವ ವೆಂಕಟರಾವ ನಾಡಗೌಡ ಹೇಳಿದರು.
ನಗರದಲ್ಲಿ ಸಹಕಾರ ಮಹಾಮಂಡಳಿ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ವರ್ಗದ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನಮ್ಮ ದೇಶದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಿ, ಉತ್ತಮ ಮಾರುಕಟ್ಟೆ ಒದಗಿಸಿ ಸಹಕಾರ ಸಂಘಗಳ ಒಕ್ಕೂಟಕ್ಕೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಿ ರೈತರ ಏಳಿಗೆಗೆ ಶ್ರಮಿಸಬೇಕು ಎಂದರು. ರಾಜ್ಯ ಸಹಕಾರ ಮಹಾಮಂಡಳಿಯ ಸಂಶೋಧನೆ ಮತ್ತು ಮೌಲೀಕರಣ ವಿಭಾಗದ ಡಾ. ಎನ್.ಶಿವಕುಮಾರ, ಒತ್ತಡ ನಿರ್ವಹಣೆ ಮತ್ತು ಉತ್ತಮ ನಾಯಕತ್ವದ ಸೂತ್ರಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಾಲೂಕಿನ ಎಲ್ಲ ವರ್ಗಗಳ ಸಹಕಾರ ಸಂಘಗಳಿಂದ ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಿಗೆ, 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಂ ಚಂದ್ರಶೇಖರಯ್ಯ ಸ್ವಾಮಿ, ಹೊಸಪೇಟೆ ಬಿಡಿಸಿಸಿ ಕೆಸಿಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಜಯಪ್ರಕಾಶ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ, ಜಿಲ್ಲಾ ಸಹಕಾರ ಯೂನಿಯನ್ ವ್ಯವಸ್ಥಾಪಕ ಎಂ.ಬಸವರಾಜ, ಸಹಕಾರಿಗಳಾದ ಚೊಕ್ಕ ಬಸವನಗೌಡ ಬಸವನ ಗೌಡ, ಬಿ.ಕೆ. ಕೆರೆ ಕೊಡಪ್ಪ, ವಿ.ಆರ್ ಸಂದೀಪ್ ಸಿಂಗ್, ಎಲ್.ಎಸ್ ಆನಂದ, ಮೂಕಯ್ಯ ಸ್ವಾಮಿ, ನಾಯಕರ ಹುಲಗಪ್ಪ, ನವೀನಕುಮಾರ್ ರೆಡ್ಡಿ, ಯು.ಆರ್. ನಾಗರಾಜ, ಬಾಲಪ್ಪನವರ ಮಲ್ಲಿಕಾರ್ಜುನ, ಬಂಡೆ ರಂಗಪ್ಪ, ಬೋಗರೆಡ್ಡಿ, ಬಸವಣ್ಣಯ್ಯ ಸ್ವಾಮಿ, ಪಂಪನಗೌಡ, ಉದಯ ಕುಮಾರ, ದೇಶರಾಜ ರೆಡ್ಡಿ ಸ್ವಾಮಿ, ಸೂಗೂರುಗೌಡ, ಸತ್ಯನಾರಾಯಣ ಗೋಪಾಲ್ ರೆಡ್ಡಿ ಮತ್ತಿತರರಿದ್ದರು.