

ಬೈಂದೂರು: ಬೈಂದೂರು ಸಮೀಪ ಈಚರ್ ವಾಹನದಲ್ಲಿ ಅಕ್ರಮವಾಗಿ ಹತ್ತು ಜಾನುವಾರಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಬ್ರಾರುಲ್ ಹಾಕ್ ಮೋಮಿನ್, ಮೊಹಮ್ಮದ್ ಹೈದರ್, ಮೊಹಮ್ಮದ್ ಆರೀಫ್ ಎಂಬುವರನ್ನು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ಮುಂಜಾನೆ ಯಡ್ತರೆ ಜಂಕ್ಷನ್ ಬಳಿ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಪೊಲೀಸರ ಸಾಗಾಟದ ವಾಹನ ಹಾಗೂ ಅದಕ್ಕೆ ಬೆಂಗಾವಲು ನೀಡಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.