

ಗಂಗೊಳ್ಳಿ : ಕೆಲಸದ ವಿಷಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಟನೆ ಗುಜ್ಜಾಡಿ ಎಂಬಲ್ಲಿ ನಡೆದಿದೆ. ಗುಜ್ಜಾಡಿ ಗ್ರಾಮದ ಹೇನ್ಸಲ್ ಎಂಬುವರು ರಿತೇಶ್ ಮತ್ತು ತೇಜಸ್ ಎಂಬುವರೊಂದಿಗೆ ಕೆಲಸದ ವಿಷಯದಲ್ಲಿ ಜಗಳವಾಗಿತ್ತು. ಜಾನ್ ಡಿಸಿಲ್ವಾ ಅವರ ಡಿಜೆಯನ್ನು ಚೆಕ್ ವಾಡಿ ಹೇನ್ಸಲ್ ಮನೆಯಿಂದ ಹೊರಗೆ ಬರುತ್ತಿದ್ದಾಗ ರಿತೇಶ್ ಹಾಗೂ ತೇಜಸ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಹೇನ್ಸಲ್ ಕತ್ತಿನಲ್ಲಿದ್ದ ಸರವನ್ನು ಕಿತ್ತು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.