ನಮ್ಮ ನಿರ್ಧಾರಕ್ಕೆ ಸ್ಪಂದಿಸದ ಸಾರಿಗೆ ಇಲಾಖೆ ಡಿಸಿ

7 KND1
Published on

ಕುಂದಗೋಳ: ತಾಲೂಕಿನ ಹಳ್ಳಿಗಳ 9 ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಲು ಗ್ಯಾರಂಟಿ ಕಮಿಟಿ ನಿರ್ಧರಿಸಿ ಸಾರಿಗೆ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದೇವೆ. ಆದರೂ ಸಾರಿಗೆ ಇಲಾಖೆ ಡಿಸಿ ಸ್ಪಂದನೆ ನೀಡುತ್ತಿಲ್ಲ. ಮೇ 15ರವರೆಗೆ ಸಮಯ ನೀಡುತ್ತೇವೆ. ಅದಕ್ಕೂ ಸ್ಪಂದನೆ ನೀಡದಿದ್ದಲ್ಲಿ ಕಮಿಟಿ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಮಷಾದ ಬೇಗಂ ಮಾತನಾಡಿ, ಗೃಹ ಲಕ್ಷ್ಮೀ ಯೋಜನೆಯ 357 ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ. ಇದರಲ್ಲಿ ಐಟಿ, ಜಿಎಸ್​ಟಿ ಹೊಂದಿರುವ ಕೆಲ ಫಲಾನುಭವಿಗಳು ಇದ್ದು, ಅದನ್ನು ಮೇಲಾಧಿಕಾರಿಗಳೊಂದಿಗೆ ರ್ಚಚಿಸಿ ಸರಿಪಡಿಸುತ್ತೇವೆ ಎಂದು ಹೇಳಿದರು.

ನಂತರ ಹೆಸ್ಕಾಂ ಇಲಾಖೆಯ ಅಧಿಕಾರಿ ಹಾಗೂ ಯುವ ನಿಧಿ ಯೋಜನೆ ಸಂಬಂಧಿಸಿದ ಅಧಿಕಾರಿಗಳು ಮಾತನಾಡಿದರು.

ಇದಕ್ಕೂ ಮುನ್ನ ಗ್ಯಾರಂಟಿ ಸಮಿತಿ ಸದಸ್ಯ ಅಡಿವೆಪ್ಪ ಹೆಬಸೂರ ಮಾತನಾಡಿ, ತರ್ಲಘಟ್ಟ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿ ಜೋತು ಬಿದ್ದು ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಆಗಿದೆ. ಅವುಗಳನ್ನು ಸರಿಪಡಿಸಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಶಶಿಧರ ಸೋಮರೆಡ್ಡಿ, ಅಡಿವಪ್ಪ ಹೆಬಸೂರ, ವೆಂಕಪ್ಪ ಸಂಶಿ, ಚಂದ್ರು ಕಾಳೆ, ಯಲಪ್ಪ ಸಿಂಗನ್ನವರ, ಶಂಕ್ರಪ್ಪ ಹಡಪದ, ಬಸಮ್ಮ ಸುಳ್ಳಿಕೆರೆ, ಇರ್ಷಾದ ಮುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net