ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

tarabeti
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ
Published on

ಗಂಗೊಳ್ಳಿ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಶಿಕ್ಷಕರಿಗೆ ಪಾಠದಲ್ಲಿ ಬಳಸಬೇಕಾದ ವಿವಿಧ ಕೌಶಲಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಬೇಸ್ ಸಂಸ್ಥೆ ನಿರ್ದೇಶಕ ರಾಮಪ್ರಸಾದ್ ಎಚ್.ಎಸ್. ತರಬೇತಿ ನಡೆಸಿಕೊಟ್ಟರು. ಬೇಸ್‌ನ ಮಾರ್ಕೆಟಿಂಗ್ ಅಭಿವೃದ್ಧಿಕಾರ ಶ್ರೀಕರ ಸಹಕರಿಸಿದರು.
ಪ್ರಾಂಶುಪಾಲ ಶರಣಕುಮಾರ ಮಾತನಾಡಿ, ರಾಮಪ್ರಸಾದರ ಮಾರ್ಗದರ್ಶನ ನಮ್ಮ ಶಾಲೆ ಶಿಕ್ಷಕರಿಗೆ 3-4 ವರ್ಷಗಳಿಂದ ನಿರಂತರವಾಗಿ ಲಭಿಸುತ್ತಿದ್ದು, ಅವರು ಸದಾ ಲವಲವಿಕೆಯಿಂದಿದ್ದು, ಮುಗುಳ್ನಗುತ್ತಾ, ಸಮಯ ಪಾಲಿಸುತ್ತಾ ಪಾಠ ನಡೆಸುತ್ತಾರೆ ಎಂದರು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net