ಸಂಗೀತ ಚಿಕಿತ್ಸೆಯಿಂದ ಸಕಾರಾತ್ಮಕ ಆಲೋಚನೆ : ಡಾ.ವಿಜಯಲಕ್ಷ್ಮೀ ಸುಬ್ರಹ್ಮಣ್ಯಂ ಮಾಹಿತಿ

musical treatment
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸಂಗೀತ ಚಿಕಿತ್ಸೆ ಮನುಷ್ಯನ ದೈಹಿಕ ಆರೋಗ್ಯ ಹೆಚ್ಚಳ ಮಾಡುವುದಲ್ಲದೆ ಸಕಾರಾತ್ಮಕ ಯೋಚನೆ ಹುಟ್ಟುಹಾಕುವ ಮೂಲಕ ಮನುಷ್ಯನ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕಾರ್ಯವೆಸಗುತ್ತದೆ ಎಂದು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಇ.ಎನ್.ಟಿ ತಜ್ಞೆ ಹಾಗೂ ಸಂಗೀತ ಚಿಕಿತ್ಸಕಿ ಡಾ.ವಿಜಯಲಕ್ಷ್ಮೀ ಸುಬ್ರಹ್ಮಣ್ಯಂ ಹೇಳಿದರು.

ದೈಗೋಳಿ ಶ್ರೀ ಸಾಯಿನಿಕೇತನ ಸೇವಾ ಸಂಸ್ಥೆಯ ಆಶ್ರಮ ವಾಸಿಗಳಿಗೆ ಸಂಗೀತ ಚಿಕಿತ್ಸೆ ನೀಡುವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಶ್ರೀ ಸಾಯಿನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಉದಯಕುಮಾರ್ ಉದ್ಘಾಟಿಸಿ ಮಾತನಾಡಿ, ಆಶ್ರಮ ವಾಸಿಗಳ ಮಾನಸಿಕ ಆರೋಗ್ಯ ಸುಧಾರಿಸುವ ಹಾಗೂ ಮನಸ್ಸನ್ನು ಉಲ್ಲಾಸಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಸಂಗೀತ ಚಿಕಿತ್ಸಾ ತರಬೇತಿಯ ಪ್ರಯೋಜನ ಆಶ್ರಮವಾಸಿಗಳೆಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಯೆನೆಪೋಯ ಮೆಡಿಕಲ್ ಕಾಲೇಜಿನ ವಾಕ್ ಶ್ರವಣ ತಜ್ಞೆ, ಸಹಾಯಕ ಪ್ರಾಧ್ಯಾಪಕಿ ಡಾ.ಪಾವನಾ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಫರಾ, ಕಶ್ವಿ ಸಹಕಾರದೊಂದಿಗೆ ಆಶ್ರಮ ವಾಸಿಗಳಿಗೆ ವಿವಿಧ ವ್ಯಾಯಾಮ, ಹಾಡು, ಗುಂಪು ಚಟುವಟಿಕೆ, ಧ್ಯಾನ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net