

ಬೆಳ್ತಂಗಡಿ: 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಾರಂಭಿಸುವಾಗ ಬೆಳ್ತಂಗಡಿ ತಾಲೂಕು ಇದ್ದ ಸ್ಥಿತಿಗತಿಯನ್ನು ಅವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಗರ್ಡಾಡಿ ವಲಯದ ಪಡಂಗಡಿಯಲ್ಲಿ ನಡೆದ ಪಡಂಗಡಿ ಹಾಗೂ ಕನ್ನಡಿಕಟ್ಟೆ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ಯೋಜನೆಯ ಮೂಲ ಉದ್ದೇಶ ಸೇವೆ. ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಕಾರ ನೀಡುವುದು ಮತ್ತು ದುಶ್ಚಟಗಳ ವಿರುದ್ಧ, ಮೂಢನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪಡಂಗಡಿ ಗ್ರಾಪಂ ಸದಸ್ಯ ಸಂತೋಷ್ ಜೈನ್, ಧರ್ಮಗುರು ರೋಶನ್ ಕ್ರಾಸ್ತಾ ಮಾತನಾಡಿದರು. ಪಡಂಗಡಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪಡಂಗಡಿ ಮಸೀದಿ ಪಿ.ಎಚ್.ಮುಹಮ್ಮದ್ ಆಶ್ರಫ್, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಂಥೋನಿ ಫರ್ನಾಂಡಿಸ್, ದ.ಕ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಒಕ್ಕೂಟದ ನೂತನ ಅಧ್ಯಕ್ಷ ಸುರೇಶ್ ಪೂಜಾರಿ, ಉಸ್ಮಾನ್, ನಿಕಟಪೂರ್ವ ಅಧ್ಯಕ್ಷೆ ವಿನೋದಾ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರೇಷ್ಮಾ ವರದಿ ಮಂಡಿಸಿದರು. ಮೇಲ್ವಿಚಾರಕ ಗುಣಕರ್, ವಸಂತ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಹೇಮಾವತಿ ವಂದಿಸಿದರು. ವಲಯ ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಸ್ವಾತಿ ಸಹಕರಿಸಿದರು.
ತಾಲೂಕಿನ ಜನರಿಗೆ ತಮ್ಮ ಜೀವನ ಕಟ್ಟಿಕೊಳ್ಳಲು ಬೇಕಾದ ಶಕ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದೆ. ಜೀವನಕ್ಕೆ ಬೇಕಾದ ಅರ್ಥಿಕ ಸಹಕಾರ, ವಿದ್ಯಾಭ್ಯಾಸಕ್ಕೆ ಬೇಕಾದ ಸುಜ್ಞಾನ ನಿಧಿ ಶಿಷ್ಯವೇತನ, ಮೂಲಸೌಕರ್ಯ ಅಭಿವೃದ್ಧಿಗೆ ಪೂರಕ ಮನೆ ರಚನೆಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಆರೋಗ್ಯದ ಸಂಕಲ್ಪಕ್ಕೆ ಸಂಪೂರ್ಣ ಸುರಕ್ಷಾ, ಅರ್ಥಿಕ ಭದ್ರತೆಯ ಕ್ರೋಡೀಕರಣಕ್ಕೆ ಒದ್ದಾಟ ಮಾಡುತ್ತಿದ್ದ ಬಡ ಜನರಿಗೆ ಆರ್ಥಿಕ ಸಬಲೀಕರಣ ಕಲ್ಪಿಸಿ ಸ್ವಾವಲಂಬನೆಯ ಬದುಕನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳು ಒದಗಿಸಿವೆ. ಹರೀಶ್ ಪೂಂಜ, ಶಾಸಕ
ಹರೀಶ್ ಪೂಂಜ, ಶಾಸಕ