ಬೆಳ್ತಂಗಡಿ ಕಿಸಾನ್ ಸಂಘದಿಂದ ಪ್ರಶಿಕ್ಷಣ ವರ್ಗ : 200 ರೈತ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿ

18
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ದಕ್ಷಿಣ ಪ್ರಾಂತ ಬೆಳ್ತಂಗಡಿ ತಾಲೂಕು ಸಮಿತಿ ಮತ್ತು ಗ್ರಾಮ ಸಮಿತಿ ರೈತ ಸದಸ್ಯರ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಶ್ರೀರಾಮ ಶಾಲೆ ಸುಳ್ಕೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಗೋಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ಘಟಕ ಅಧ್ಯಕ್ಷ ಎಸ್.ಆರ್. ಭಾಸ್ಕರ್ ಶಿರ್ಲಾಲು ಧ್ವಜಾರೋಹಣಗೈದರು.

ಸುಳ್ಕೇರಿ ಶ್ರೀರಾಮ ಶಾಲೆ ಅಧ್ಯಕ್ಷ ರಾಜು ಪೂಜಾರಿ, ಕರ್ನಾಟಕ ರಾಜ್ಯ ಕಿಸಾನ್ ಸಂಘ ರಾಜ್ಯಾಧ್ಯಕ್ಷ ಭೀಮಸೇನಾ ಕೊಕರೆ, ಕಾರ್ಯದರ್ಶಿ ಪುಟ್ಟಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಮೇಶ್ ರಾಜು, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಮಹಿಳಾ ಪ್ರಮುಖರು ಪುಟ್ಟಮ್ಮ ಶ್ರೀಕಂಠೇಗೌಡ, ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರತಿನಿಧಿ ಸುಬ್ರಾಯ ಬಿ ಎಸ್, ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷ ಸತ್ಯನಾರಾಯಣ ಭಟ್, ಪ್ರಮುಖರಾದ ಅಂಬುಜಾಕ್ಷ, ಶಾಂಭವಿ, ನಿತ್ಯಾನಂದ ನಾವರ, ಶಿವಾನಂದ ಹೆಗಡೆ ಕರಂಬಾರು, ಲಿಂಗಪ್ಪನಾಯ್ಕ, ಜಯ ಸಾಲಿಯನ್, ವಿಜಯಕುಮಾರ್ ಜೈನ್, ಶೀಲಾ ಉಪಸ್ಥಿತರಿದ್ದರು.

ಪ್ರವೀಣ್ ದೇವಾಡಿಗ, ರತ್ನಾಕರ ಶೆಟ್ಟಿ ಹಾಗೂ ಪ್ರದೀಪ ರೈತ ಗೀತೆ ಹಾಡಿದರು. ಜಯಶಾಲಿಯನ್ ಸ್ವಾಗತಿಸಿದರು. ನಿತ್ಯಾನಂದ ನಾವರ ವಂದಿಸಿದರು. ದೇವಿಪ್ರಸಾದ್ ಅರ್ವ, ಲಿಂಗಪ್ಪನಾಯ್ಕ ಕಾರ್ಯಕ್ರಮ ನಿರೂಪಿಸಿದರು. 42 ಗ್ರಾಮಗಳಿಮದ 200 ರೈತ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net