ಇಂದಿನಿಂದ ಮದ್ದೂರಿನಲ್ಲಿ ರೈಲು ನಿಲುಗಡೆ

ಇಂದಿನಿಂದ ಮದ್ದೂರಿನಲ್ಲಿ ರೈಲು ನಿಲುಗಡೆ
Published on

ಮದ್ದೂರು: ಮದ್ದೂರಿನಲ್ಲಿ ರೈಲು ನಿಲ್ಲಬೇಕು ಎನ್ನುವ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದೆ.

ಮದ್ದೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನಿತ್ಯ ಬೆಂಗಳೂರು ಮತ್ತು ಮೈಸೂರಿಗೆ ವಿವಿಧ ಕೆಲಸಗಳಿಗೆ ನೂರಾರು ಜನರು ತೆರಳುತ್ತಾರೆ. ಆದರೆ ಕೆಲವು ರೈಲುಗಳು ಮದ್ದೂರಿನಲ್ಲಿ ನಿಲುಗಡೆ ಇಲ್ಲದೆ ತೊಂದರೆಯಾಗುತ್ತಿತ್ತು. ಹಲವು ವರ್ಷಗಳಿಂದ ರೈಲ್ವೆ ಇಲಾಖೆಗೆ ಪ್ರಯಾಣಿಕರು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಸಮಸ್ಯೆ ಕುರಿತು ಪ್ರಯಾಣಿಕರು ಹಾಗೂ ಸಾರ್ವಜನಿಕರು ಶಾಸಕ ಕೆ.ಎಂ.ಉದಯ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ರೈಲುಗಳ ನಿಲುಗಡೆ ಕೋರಿ ಶಾಸಕರು ಇಲಾಖೆಗೆ ಮನವಿ ಸಲ್ಲಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ಕೆಲವು ರೈಲುಗಳನ್ನು ಶಿವಪುರದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲು ತೀರ್ಮಾನಿಸಿದೆ.

ಜ.29 ರಿಂದ ಕೆಳಕಂಡ ರೈಲುಗಳು ಮದ್ದೂರಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆಯಾಗಲಿವೆ.

ಮೈಲಾಡುದೊರೈಯಿಂದ ಮೈಸೂರಿಗೆ ಹೋಗುವ 16231 ಸಂಖ್ಯೆಯ ರೈಲು ಮದ್ದೂರಿನಲ್ಲಿ ಬೆಳಗ್ಗೆ 6.50ಕ್ಕೆ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ 16585 ಸಂಖ್ಯೆಯ ಮಂಗಳಾ ಎಕ್ಸ್ ಪ್ರೆಸ್ ರೈಲು ರಾತ್ರಿ 10.00 ಕ್ಕೆ, ಕುಚುವೇಲಿ ಯಿಂದ ಮೈಸೂರಿಗೆ ತೆರಳುವ 16316 ಸಂಖ್ಯೆಯ ಎಕ್ಸ್‌ಪ್ರೆಸ್ ಬೆಳಗ್ಗೆ 9.45ಕ್ಕೆ, ಮುರುಡೇಶ್ವರ ದಿಂದ ಬೆಂಗಳೂರು ಎಕ್ಸ್ ಪ್ರೆಸ್ ಬೆಳಗ್ಗೆ 4.42ಕ್ಕೆ, 16315 ಸಂಖ್ಯೆಯ ಮೈಸೂರಿಂದ ಕುಚುವೇಲಿ ಎಕ್ಸ್‌ಪ್ರೆಸ್ ಮಧ್ಯಾಹ್ನ 1.50 ಕ್ಕೆ ಮದ್ದೂರಿನಲ್ಲಿ ನಿಲುಗಡೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಮದ್ದೂರು ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಬೆಂಗಳೂರು ಮತ್ತು ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಲವು ರೈಲುಗಳನ್ನು ಶಿವಪುರ ನಿಲ್ದಾಣದಲ್ಲಿ ನಿಲ್ಲಿಸಲು ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇಲಾಖೆ ಅಧಿಕಾರಿಗಳು ಸ್ಪಂದಿಸಿರುವುದು ಸಂತೋಷದ ವಿಷಯ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಕೆ.ಎಂ.ಉದಯ, ಶಾಸಕ ಮದ್ದೂರು

ಶಿವಪುರದ ರೈಲ್ವೆ ನಿಲ್ದಾಣದಲ್ಲಿ ಕೆಲವು ರೈಲುಗಳನ್ನು ನಿಲ್ಲಿಸದ ಪರಿಣಾಮ ಪ್ರಯಾಣಿಕರಿಗೆ ತುಂಬ ತೊಂದರೆಯಾಗಿತ್ತು. ಇದೀಗ ಶಾಸಕ ಕೆ.ಎಂ.ಉದಯ್ ಅವರ ಮನವಿ ಮೇರೆಗೆ ರೈಲುಗಳನ್ನು ನಿಲ್ಲಿಸುತ್ತಿರುವುದು ಮದ್ದೂರು ಮತ್ತು ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೆ ಅನುಕೂಲವಾಗಿದೆ.
ಎಸ್.ಕೆ.ಸುಂದರ್‌ರಾಜ್, ಶಿವಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net