ಹಳದಿ ಹಾದಿಯಿಂದ ಟ್ರಾಫಿಕ್​ ರಿಲೀಫ್

metro traphic
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜಧಾನಿಯಲ್ಲಿ 40ಕ್ಕೂ ಅಧಿಕ ಕಡೆ ಸಂಚಾರ ಸಿಕ್ಕಿನ ಸಮಸ್ಯೆ ಇದ್ದು, ಇದೀಗ ನಮ್ಮ ಮೆಟ್ರೋದ ಹಳದಿ ಮಾರ್ಗ ಆರಂಭಗೊಂಡ ಬಳಿಕ ನಗರದ ದಣ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಕೊಂಚ ಪರಿಹಾರ ಲಭಿಸಿದೆ. ಎಲೆಕ್ಟ್ರಾನಿಕ್ಸ್​ ಸಿಟಿ ಮಾರ್ಗದ ಸಿಲ್ಕ್​ಬೋರ್ಡ್​ ಸೇರಿದಂತೆ ವಿವಿಧ ಜಂಕ್ಷನ್​ ಹಾಗೂ ರಸ್ತೆಗಳಲ್ಲಿ ಸುಮಾರು ಶೇ.25ರಷ್ಟು ಟ್ರಾಫಿಕ್​ ಸಮಸ್ಯೆ ಇಳಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್​. ವಿ. ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್​ ಬೊಮ್ಮಸಂದ್ರದವರೆಗೆ 19.15 ಕಿಮೀ ಉದ್ದದ ಹಳದಿ ಮಾರ್ಗದಲ್ಲಿ ಸರಾಸರಿ 90 ಸಾವಿರದಿಂದ 1 ಲಕ್ಷದ ವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ದಿನದಿನಕ್ಕೆ ಈ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಈಗ ರೈಲುಗಳ ಸಂಖ್ಯೆ ಕಡಿಮೆ ಇದ್ದು, ರೈಲುಗಳ ಅಂತರ 25 ನಿಮಿಷ ಇದ್ದರೂ, ಜನ ಮೆಟ್ರೋ ಪ್ರಯಾಣವೇ ಸೂಕ್ತ ಎಂದು ಮುಗಿಬೀಳುತ್ತಿರುವುದು ಸಾಮಾನ್ಯ ದೃಶ್ಯ. ಮುಂದಿನ ದಿನಗಳಲ್ಲಿ ತ್ವರಿತ ಸಂಚಾರ ಪ್ರಾರಂಭವಾದರೆ, ಈ ಮಾರ್ಗದಲ್ಲಿ ಅಂದಾಜು 3 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುವ ನಿರೀೆ ಇದ್ದು, ಈ ಭಾಗದ ಸಂಚಾರ ಸಿಕ್ಕಿಗೆ ಶಾಶ್ವತ ಪರಿಹಾರ ದೊರಕುವ ನಿರೀೆ ಇದೆ.

ದಟ್ಟಣೆಯ ಅವಧಿಯಲ್ಲಿ (ಪೀಕ್​ ಅವರ್ಸ್​) ಸಾಲುಗಟ್ಟಿ ನಿಲ್ಲುತ್ತಿದ್ದ ವಾಹನಗಳು ಇದೀಗ ಅದೇ ಜಂಕ್ಷನ್​ ಹಾಗೂ ರಸ್ತೆಗಳಲ್ಲಿ ಸುಗಮವಾಗಿ ಚಲಿಸುತ್ತಿವೆ.

'ನಮ್ಮ ಮೆಟ್ರೊ'ದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದಂತೆ ಇತ್ತ, ಖಾಸಗಿ ವಾಹನಗಳಲ್ಲಿ ರಸ್ತೆಗೆ ಇಳಿಯುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಗಿಗುಡ್ಡ, ಜಯದೇವ ಆಸ್ಪತ್ರೆ ಜಂಕ್ಷನ್​, ಸೆಂಟ್ರಲ್​ ಸಿಲ್ಕ್​ ಬೋರ್ಡ್​, ಹೊಂಗಸಂದ್ರ, ಕೂಡ್ಲುಗೇಟ್​, ಹೊಸರೋಡ್​, ಹೆಬ್ಬಗೋಡಿ, ಬೊಮ್ಮಸಂದ್ರ ಭಾಗದಲ್ಲಿ ಅತೀ ಹೆಚ್ಚು ಸಂಚಾರ ಸಿಕ್ಕಿನ ಸಮಸ್ಯೆ ಇತ್ತು. ಅದರಲ್ಲೂ ಎಲೆಕ್ಟ್ರಾನಿಕ್ಸ್​ ಸಿಟಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಆದರೆ, ಈಗ ಇಲ್ಲಿನ ವಾತಾವರಣ ಬದಲಾಗಿದೆ.

ಹಳದಿ ಮಾರ್ಗದ ಆರಂಭದಿಂದ ನಮ್ಮ ಮೆಟ್ರೋ ಜಾಲವು 96 ಕಿ.ಮೀ.ಗೆ ವಿಸ್ತರಣೆಯಾಗಿದೆ. ಈ ಮಾರ್ಗವು ಐಟಿ ಕಾಎಇಡಾರ್​ ಎಂದು ಕರೆಸಿಕೊಳ್ಳುವ ಮೂಲಕ ಇಲ್ಲಿರುವ ಐ.ಟಿ. ಕಂಪನಿಗಳಿಗೆ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.

ಮೆಟ್ರೋ ಪ್ರಯಾಣಕ್ಕೆ ಉತ್ತೇಜನೆ

ಸೆಂಟ್ರಲ್​ ಸಿಲ್ಕ್​ ಬೋರ್ಡ್​ ಹಾಗೂ ಎಲೆಕ್ಟ್ರಾನಿಕ್ಸ್​ ಸಿಟಿ ಭಾಗದಲ್ಲಿ ಜಂಕ್ಷನ್​ಗಳನ್ನು ದಾಟುವುದಕ್ಕೆ ಹರಸಾಹಸ ಪಡಬೇಕಿತ್ತು. ಹಳದಿ ಮಾರ್ಗ ಆರಂಭವಾದ ಬಳಿಕ ಸಮಸ್ಯೆಗೆ ಇಲಿನ ಪ್ರಮುಖ ಜಂಕ್ಷನ್​ಗಳಲ್ಲಿ ಟ್ರಾಫಿಕ್​ ರಿಲ್​ೀ ಕಾಣುತ್ತಿದೆ. ಅಲ್ಲದೆ, ಸುತ್ತಮುತ್ತಲಿನ ಕೈಗಾರಿಕೆಯ ಕಾರ್ಮಿಕರು, ಐಟಿ ಉದ್ಯೋಗಿಗಳು ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಉಪಯೋಗಿಸಲು ಮುಂದಾಗುತ್ತಿದ್ದಾರೆ. ಕಂಪನಿ ಮುಖ್ಯಸ್ಥರು ಹಾಗೂ ಕೈಗಾರಿಕೆ ಉದ್ಯಮಿಗಳು ಮೆಟ್ರೋ ಪ್ರಯಾಣಕ್ಕೆ ಉತ್ತೇಜನೆ ನೀಡುತ್ತಿರುವುದು ಉತ್ತಮ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net