ರಸ್ತೆ ಸುರಕ್ಷತೆಗೆ ಟ್ರಾಫಿಕ್​ ಪಾರ್ಕ್​

Traffic_Park_04
Published on

ಜಗನ್ನಾಥ್​ ಕಾಳೇನಹಳ್ಳಿ

ತುಮಕೂರು: ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು "ಟ್ರಾಫಿಕ್​ ಪಾರ್ಕ್​' ನಿರ್ಮಿಸಲಾಗಿದೆ. ತುಮಕೂರು ಸ್ಮಾರ್ಟ್​ಸಿಟಿ ಯೋಜನೆ ಅಡಿ ಪೊಲೀಸ್​ ಇಲಾಖೆ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಟ್ರಾಫಿಕ್​ ರೂಲ್ಸ್​ಗಳನ್ನು ಪರಿಚಯಿಸುವ ವಿಶಿಷ್ಟ ಪಾರ್ಕ್​ ಇದಾಗಿದೆ.

ಮನರಂಜನೆ ಜತೆ ಜತೆಗೆ ರಸ್ತೆಗಳಲ್ಲಿ ಅನುಸರಿಸಬೇಕಾದ ಸಂಚಾರ ನಿಯಮಗಳನ್ನು ಮಕ್ಕಳ ಮನಸಿನಲ್ಲಿ ಅಚ್ಚುಹೊತ್ತುವ ಪರಿಕಲ್ಪನೆ ಟ್ರಾಫಿಕ್​ ಪಾರ್ಕ್​ನದ್ದಾಗಿದೆ. ರಸ್ತೆ ಬದಿಗಳಲ್ಲಿ ಹಾಕಲಾಗಿರುವ ಸಂಚಾರ ಲಕಗಳಲ್ಲಿನ ಚಿಹ್ನೆಗಳ ಮಾಹಿತಿ, ಪೊಲೀಸ್​ ಚೌಕಿ,ಪ್ರಮುಖ ಸರ್ಕಲ್​ಗಳಲ್ಲಿನ ಅಳವಡಿಸಿರುವ ಸಿಗ್ನಲ್​ಗಳನ್ನು ಸಹ ಪಾರ್ಕ್​ನಲ್ಲಿ ಅಳವಡಿಸಿ "ಹಸಿರು, ಹಳದಿ, ಕೆಂಪು' ಬಣ್ಣದ ದೀಪ ಬೆಳಗಿದಾಗ ಅನುಸರಿಸಬೇಕಾದ ನಿಯಮಗಳನ್ನು ಸಹ ಮಕ್ಕಳಿಗೆ ಪ್ರಾತ್ಯಕೆ ಮೂಲಕ ತಿಳಿಸುವುದು ಟ್ರಾಫಿಕ್​ ಪಾರ್ಕ್​ ಮೂಲ ಉದ್ದೇಶವಾಗಿದೆ.

30 ಲಕ್ಷ ವೆಚ್ಚ : ತುಮಕೂರಿನ ಜಿಲ್ಲಾ ಪೊಲೀಸ್​ ಅಧೀಕ್ಷಕ ಕಚೇರಿ ಆವರಣದಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ 30 ಲಕ್ಷ ರೂ., ವೆಚ್ಚದಲ್ಲಿ ಟ್ರಾಫಿಕ್​ ಪಾರ್ಕ್​ ಅನ್ನು ನಿರ್ಮಿಸಲಾಗಿದೆ. ಈ ಟ್ರಾಫಿಕ್​ ಪಾರ್ಕ್​ನಲ್ಲಿ ಸಂಚಾರ ನಿಯಮಗಳಲ್ಲದೇ ಸಂಕೇತಗಳು ಏನನ್ನೂ ಸೂಚಿಸಲಿವೆ ಎಂಬ ಮಾಹಿತಿಗಳು ದೊರೆಯಲಿದೆ. ರಸ್ತೆ ತಿರುವಿನ ಚಿಹ್ನೆಗಳು, ಶಾಲಾ ವಲಯ, ಆಸ್ಪತ್ರೆ, ಕಿರಿದಾದ ರಸ್ತೆ, ಬಲ ತಿರುವು, ಎಡ ತಿರುವು ಹೀಗೆ ಸೂಚನ ಲಕಗಳನ್ನು ಕಾಣಬಹುದು. ಈ ಪಾಥ್​ನಲ್ಲಿ ಹಾದು ಹೋಗುವ ಮಕ್ಕಳಿಗೆ ಪೊಲೀಸ್​ ಚೌಕಿಯು ಸಿಗಲಿದೆ. ಸಿಗ್ನಲ್​ ಲೈಟ್​ ಗಳನ್ನು ಸಹ ಅಳವಡಿಸಿದ್ದು ಹಸಿರು ದೀಪ ಬೆಳಗಿದಾಗ ಮುಂದೆ ಚಲಿಸಬಹುದು.

ಝೀಬ್ರಾ ಕ್ರಾಸ್​: ರಸ್ತೆಗಳಲ್ಲಿ ಸಂಚರಿಸುವ ವೇಳೆ ಏನೇನು ಸೂಚನೆಗಳನ್ನು ಇರುತ್ತವೊ ಅವೆಲ್ಲವೂ ಈ ಪಾರ್ಕ್​ನಲ್ಲಿ ಸಿಗಲಿದೆ. ರಸ್ತೆ ದಾಟಲು ಝೀಬ್ರಾ ಕ್ರಾಸ್​ ಬಳಸಬೇಕಾಗುತ್ತದೆ. ವೇಗ ಮಿತಿ, ರಸ್ತೆ ಉಬ್ಬು, ಪಾರ್ಕಿಂಗ್​, ನೋ ಪಾರ್ಕಿಂಗ್​ ಸೂಚನಾ ಲಕಗಳು ಸಹ ಇರಲಿವೆ. ಇದರಿಂದ ರಸ್ತೆಗಳಲ್ಲಾಗುವ ಅವಡಗಳನ್ನು ತಪ್ಪಿಸಬಹುದು. ಇದಲ್ಲದೆ ಮಕ್ಕಳಿಗೆ ಆಟೋಟ ಉಪಕರಣಗಳು ಇರಲಿವೆ. ಒಟ್ಟಾರೆ ರಸ್ತೆ ನಿಯಮಗಳ ಜಾಗೃತಿ ಮೂಡಿಸುವ ಟ್ರಾಫಿಕ್​ ಪಾರ್ಕ್​ ಇದಾಗಿದೆ ಎನ್ನುತ್ತಾರೆ ಸ್ಮಾರ್ಟ್​ಸಿಟಿ ಎಂಡಿ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ.

ಆಯುಕ್ತರ ಕನಸಿನ ಕೂಸು ಸ್ಮಾರ್ಟ್​ಸಿಟಿ ಎಂಡಿಯು ಆದ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರ ಕನಸಿನ ಕೂಸು ಈ ಟ್ರಾಫಿಕ್​ ಪಾರ್ಕ್​ ಎನ್ನುಬಹುದು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮಾರ್ಗದರ್ಶನದಲ್ಲಿ ಟ್ರಾಫಿಕ್​ ಪೊಲೀಸರ ನೆರವಿನೊಂದಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳನ್ನು ಶಾಲಾ ಹಂತದಲ್ಲೇ ಮಕ್ಕಳಲ್ಲಿ ಮೂಡಿಸುವ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಟ್ರಾಫಿಕ್​ ಪಾರ್ಕ್​ ರೂಪಿಸಲಾಗಿದೆ.

ಮಕ್ಕಳು ಉದ್ಯಾನವನದಲ್ಲಿ ಆಟವಾಡುತ್ತಲೇ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳನ್ನು ಕಲಿಯಬೇಕೆಂಬ ಉದ್ದೇಶದಿಂದ ಟ್ರಾಫಿಕ್​ ಪಾರ್ಕ್​ ನಿರ್ಮಿಸಲಾಗಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಪೊಲೀಸ್​ ಇಲಾಖೆ ಸಹಕಾರದಲ್ಲಿ ಈ ಪಾರ್ಕ್​ ಅಭಿವೃದ್ಧಿ ಪಡಿಸಲಾಗಿದೆ. ಶ್ರೀದಲ್ಲಿ ಮಕ್ಕಳಿಗೆ ಪಾರ್ಕ್​ ತೆರೆಯಲಾಗುವುದು. ಬಿ.ವಿ.ಅಶ್ವಿಜ ಆಯುಕ್ತೆ, ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net