ಮೆಲ್ಕಾರ್ ಬಳಿ ಟ್ರಾಫಿಕ್ ಜಾಮ್: ಪಾಣೆಮಂಗಳೂರು - ಕಲ್ಲಡ್ಕ ತನಕವೂ ಸಾಲುಗಟ್ಟಿ ನಿಂತ ವಾಹನಗಳು

web - melkar
ಟ್ರಾಫಿಕ್ ಜಾಮ್‌ನಿಂದ ಪಾಣೆಮಂಗಳೂರು ಬಳಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು.
Published on

ಬಂಟ್ವಾಳ: ಲಾರಿಯೊಂದರ ಡೀಸೆಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ.

ಡೀಸೆಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಲಾರಿ

ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಮಗ್ರಿ ಕೊಂಡು ಹೋಗುತ್ತಿದ್ದ ಲಾರಿಯೊಂದರ ಡೀಸೆಲ್ ಖಾಲಿಯಾಗಿ ರಸ್ತೆಯ ಮಧ್ಯೆ ನಿಂತುಕೊಂಡ ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.

ರಸ್ತೆಯುದ್ದಕ್ಕೂ ವಾಹನಗಳ ಸರತಿ ಸಾಲು

ನರಹರಿ ಪರ್ವತದ ಬಳಿಯಿಂದ ಪಾಣೆಮಂಗಳೂರು ವರೆಗೆ ರಸ್ತೆಯುದ್ದಕ್ಕೂ ವಾಹನ ಸರತಿ ದೃಶ್ಯ ಕಂಡು ಬಂತು. ಇನ್ನೊಂದು ಭಾಗದಲ್ಲಿ ಕಲ್ಲಡ್ಕದ ವರೆಗೆ ವಾಹನಗಳು ಸಾಲಿನಲ್ಲಿ ನಿಲ್ಲಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net